ಬಿಜೆಪಿ-ಆರ್‌ಎಸ್‌ಎಸ್‌ ನಡ್ವೆ ಕೆಲ ಭಿನ್ನಾಭಿಪ್ರಾಯ ಇರಬಹುದು, ಎಲ್ಲಿಯೂ ಸಂಘರ್ಷವಿಲ್ಲ: ಮೋಹನ್ ಭಾಗವತ್

Public TV
2 Min Read

– ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲೂ ನಮ್ಮ ಪಾತ್ರ ಇಲ್ಲ ಎಂದ ಆರ್‌ಎಸ್‌ಎಸ್‌ ಮುಖ್ಯಸ್ಥ

ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ (BJP And RSS) ನಡುವೆ ಕೆಲವು ಭಿನ್ನಾಭಿಪ್ರಾಯ ಇರಬಹುದು, ಆದ್ರೆ ಎಲ್ಲಿಯೂ ಸಂಘರ್ಷವಿಲ್ಲ, ದ್ವೇಷವೂ ಇಲ್ಲ. ನಮ್ಮಲ್ಲಿ ಪರಸ್ಪರ ನಂಬಿಕೆ ಇದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ (Mohan Bhagwat) ಹೇಳಿದ್ದಾರೆ.

ಆರ್‌ಎಸ್‌ಎಸ್‌ಗೆ (RSS) 100 ವರ್ಷಗಳ ಶತಮಾನೋತ್ಸವ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಸಹಕಾರದ ಕೊರತೆಯಿಂದ ಬಿಜೆಪಿ ಬಹಮತದಿಂದ ದೂರ ಉಳಿಯುತೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದರು. ಇದನ್ನೂ ಓದಿ: ಕೇಂದ್ರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಗಣೇಶ ಹಬ್ಬದ ಬಂಪರ್‌ ಗಿಫ್ಟ್‌ – ಪಿಎಂ ಸ್ವನಿಧಿ ಯೋಜನೆ 5 ವರ್ಷ ವಿಸ್ತರಣೆ

ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ (BJP National President) ಆಯ್ಕೆ ಬಗ್ಗೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಎಲ್ಲವನ್ನೂ ನಿರ್ಧರಿಸುತ್ತದೆ ಅನ್ನೋದು ತಪ್ಪು. ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ರೆ ನಾವು ಪರಸ್ಪರ ಸಲಹೆಗಳನ್ನಷ್ಟೇ ನೀಡಬಹುದು ಎಂದು ಹೇಳಿದರು. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

ಸರ್ಕಾರದೊಂದಿಗೆ ಸಂಘದ ಸಮನ್ವಯದ ಬಗ್ಗೆ ಮಾತನಾಡುತ್ತಾ, ಪ್ರಸ್ತುತ ಸರ್ಕಾರ ಮಾತ್ರವಲ್ಲ, ಪ್ರತಿಯೊಂದು ಸರ್ಕಾರದೊಂದಿಗೆ ನಮಗೆ ಉತ್ತಮ ಸಮನ್ವಯವಿದೆ ಎಲ್ಲಿಯೂ ಯಾವುದೇ ಜಗಳವಿಲ್ಲ ಎಂದರು. ಸಂಘವು ಬಿಜೆಪಿ ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳನ್ನು ಏಕೆ ಬೆಂಬಲಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿ, ಒಳ್ಳೆಯ ಕೆಲಸಕ್ಕಾಗಿ ನಮ್ಮಿಂದ ಸಹಾಯ ಕೇಳುವವರಿಗೆ ನಾವು ಸಹಾಯ ಮಾಡುತ್ತೇವೆ. ಓಡಿಹೋದವರಿಗೆ ಸಹಾಯ ಸಿಗುವುದಿಲ್ಲ ಎಂದರಲ್ಲದೇ ನಾವು ಪ್ರತಿಯೊಂದು ಸರ್ಕಾರದೊಂದಿಗೆ ಅಂದ್ರೆ ಕೇಂದ್ರ, ರಾಜ್ಯ ಸರ್ಕಾರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ, ಆದರೆ ಕೆಲವು ವ್ಯವಸ್ಥೆಗಳು ಕೆಲವು ಆಂತರಿಕ ವಿರೋಧಾಭಾಸ ಹೊಂದಿವೆ ಎಂದರು.

ತಂತ್ರಜ್ಞಾನ ಮತ್ತು ಆಧುನೀಕರಣದ ಯುಗದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ಸವಾಲನ್ನು ಆರ್‌ಎಸ್‌ಎಸ್ ಹೇಗೆ ನೋಡುತ್ತದೆ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅವರು ತಂತ್ರಜ್ಞಾನ ಮತ್ತು ಆಧುನಿಕತೆಯು ಶಿಕ್ಷಣಕ್ಕೆ ವಿರುದ್ಧವಾಗಿಲ್ಲ. ಶಿಕ್ಷಣ ಕೇವಲ ಮಾಹಿತಿಯಲ್ಲ, ಮನುಷ್ಯ ಸುಸಂಸ್ಕೃತನಾಗಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಪಂಚಕೋಶಿ ಶಿಕ್ಷಣದ ನಿಬಂಧನೆ ಇದೆ. ಜನರು ತಂತ್ರಜ್ಞಾನದ ಮಾಸ್ಟರ್‌ಗಳಾಗಿರಬೇಕು, ತಂತ್ರಜ್ಞಾನ ನಮ್ಮ ಮಾಸ್ಟರ್‌ಗಳಾಗಬಾರದು ಎಂದು ಹೇಳಿದರು. ಇದನ್ನೂ ಓದಿ: 2030ರ ಕಾಮನ್‌ವೆಲ್ತ್ ಗೇಮ್ಸ್‌ನ ಹರಾಜು ಪ್ರಕ್ರಿಯೆಗೆ ಕೇಂದ್ರ ಅಸ್ತು

ಶಿಕ್ಷಣ ಅಗತ್ಯ, ತಂತ್ರಜ್ಞಾನವು ಅವಿದ್ಯಾವಂತರ ಕೈಗೆ ಹೋದರೆ, ಅದು ವಿರುದ್ಧ ಪರಿಣಾಮವನ್ನು ಬೀರುತ್ತದೆ. ಶಿಕ್ಷಣ ಅಂದ್ರೆ ಕೇವಲ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದು ಎಂದಲ್ಲ. ನಮ್ಮ ಹಳೆಯ ಶಿಕ್ಷಣ ಕಣ್ಮರೆಯಾಯಿತು, ನಾವು ಗುಲಾಮರಾಗಿದ್ದಾಗ, ಹೊಸ ವ್ಯವಸ್ಥೆ ಬಂದಿತು. ಅವರು ವ್ಯವಸ್ಥೆಯನ್ನು ತಮ್ಮದೇ ಆದ ಪ್ರಕಾರ ಮಾಡಿದರು. ಆದರೆ ಈಗ ನಾವು ಸ್ವತಂತ್ರರಾಗಿದ್ದೇವೆ, ನಾವು ರಾಜ್ಯವನ್ನು ನಡೆಸಬೇಕು ಮಾತ್ರವಲ್ಲ, ಜನರು ಸಹ ಅದನ್ನು ಅನುಸರಿಸಬೇಕು. ನಾವು ಆ ದಿಕ್ಕಿನಲ್ಲಿ ಮುಂದುವರಿಯಬೇಕಾಗಿದೆ ಎಂದರು.

Share This Article