ಅಪ್ಪನ ಕೋಟೆಯಲ್ಲಿ ಮೆರೆದವ ಕೊನೆಗೂ ಜೈಲುಪಾಲು: ಎರಡು ಕೋರ್ಟ್ ಕಲಾಪ ಹೀಗಿತ್ತು

Public TV
3 Min Read

ಬೆಂಗಳೂರು: ಫರ್ಜಿ ಕೆಫೆಯಲ್ಲಿ ಅಟ್ಟಹಾಸ ಮೆರೆದಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಕೊನೆಗೂ ಜೈಲು ಸೇರಿದ್ದಾನೆ. ಕಳೆದೆರಡು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ನಲಪಾಡ್ ಮತ್ತು ಆತನ 6 ಸಹಚರರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

ನ್ಯಾಯಾಧೀಶ ಮಹೇಶ್ ಬಾಬು ಈ ಆದೇಶ ಹೊರಡಿಸುತ್ತಲೇ ಕಟಕಟೆಯಲ್ಲಿ ನಿಂತಿದ್ದ ನಲಪಾಡ್ ಗಳಗಳನೆ ಕಣ್ಣೀರಿಟ್ಟದ್ದಾನೆ. ಆದೇಶ ಹೊರಬಿದ್ದ ಕೂಡಲೇ ನಲಪಾಡ್ ಹಾಗೂ ಆತನ ಸಹಚರರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದರು. ನ್ಯಾಯಾಲಯದ ಆದೇಶದಂತೆ ನಲಪಾಡ್ ಹಾಗೂ ಆತನ ಸ್ನೇಹಿತರು ಮಾರ್ಚ್ 7 ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಲಿದ್ದಾರೆ. ಇದನ್ನೂ ಓದಿ: ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್

ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಮಧ್ಯಂತರ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ನಲಪಾಡ್ ಪ್ರಕರಣ ಸಂಬಂಧ ಶ್ಯಾಂ ಸುಂದರ್ ರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸುವಂತೆ ವಿದ್ವತ್ ತಂದೆ ಲೋಕನಾಥ್ ರಾಜ್ಯ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇಷ್ಟೆಲ್ಲಾ ಆದರೂ ಶಾಸಕ ಎನ್‍ಎ ಹ್ಯಾರೀಸ್ ಮಗನನ್ನು ನೋಡಲು ಭೇಟಿ ನೀಡಿಲ್ಲ. ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

8ನೇ ಎಸಿಎಂಎಂ ನ್ಯಾಯಾಯದಲ್ಲಿ ಕಲಾಪ ಹೀಗಿತ್ತು:
ನಗರದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾ. ಮಹೇಶ್ ಬಾಬು ಅವರ ಸಮ್ಮುಖದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರು ಹಾಗೂ ಆರೋಪಿ ನಲಪಾಡ್ ಪರ ವಕೀಲರು ನ್ಯಾಯಮೂರ್ತಿಗಳ ಮುಂದೇ ತಮ್ಮ ವಾದ ಮಂಡಿಸಿದರು.

ಕೋರ್ಟ್‍ನಲ್ಲಿದ್ದ ವಕೀಲರು – ಕೋರ್ಟ್ ಹಾಲ್‍ನಲ್ಲಿ ಬರೀ ಗೂಂಡಾಗಳೇ ತುಂಬಿದ್ದಾರೆ. ಪೊಲೀಸರಿಗೆ ಕೂಡಲೇ ಎಲ್ಲರನ್ನೂ ಹೊರಗೆ ಕಳುಹಿಸಲು ಸೂಚಿಸಿ ಎಂದರು. ವಕೀಲರ ಮನವಿಯಂತೆ ಕೋರ್ಟ್ ಹಾಲ್ ನಿಂದ ಆರೋಪಿಗಳನ್ನು ಹೊರತು ಪಡಿಸಿ ಎಲ್ಲರನ್ನೂ ಹೊರಗೆ ಕಳುಹಿಸಿದರು.

ಸರ್ಕಾರಿ ಪರ ವಕೀಲರು – ಕೇಸ್ ಇನ್ನೂ ಪ್ರಾಥಮಿಕ ವಿಚಾರಣೆ ಹಂತದಲ್ಲಿದೆ. ಹಲ್ಲೆಗೊಳಗಾದ ವ್ಯಕ್ತಿಯ ಮೂಳೆಗಳು ಮುರಿದಿವೆ. ಇದು ಸಿಸಿಟಿವಿಯ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಆರೋಪಿಗಳು ಆಸ್ಪತ್ರೆಗೂ ತೆರಳಿ ಹಲ್ಲೆಗೆ ಯತ್ನಿಸಿದ್ದಾರೆ. ಜಾಮೀನು ಮಂಜೂರು ಮಾಡಬೇಡಿ.

ನ್ಯಾಯಾಧೀಶರು – ಇನ್ನೂ ಹೇಳುವುದು ಏನಾದರೂ ಇದೆಯಾ ?
ಸರ್ಕಾರಿ ಪರ ವಕೀಲರು – ನಲಪಾಡ್ ಅಂಡ್ ಗ್ಯಾಂಗ್ ಸುಖಾಸುಮ್ಮನೆ ಹಲ್ಲೆ ಮಾಡಿಲ್ಲ. ವಿದ್ವತ್‍ರನ್ನು ಪ್ರಚೋದನೆ ಮಾಡಿ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೂ ನುಗ್ಗಿ ಹಲ್ಲೆ ಮಾಡಿದ್ದಾರೆ. ಆರೋಪಿಗಳು ಕೂಡ ಕೊಲೆ ಮಾಡಲು ಹೋಗಿದ್ದಾಗಿ ಒಪ್ಪಿಕೊಂಡಿದ್ದಾರೆ.

ಸರ್ಕಾರಿ ಪರ ವಕೀಲರು – ವಿದ್ವತ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ನಮಗೆ ಆಕ್ಷೇಪಣೆ ಸಲ್ಲಿಸಲು ನಾಳೆಯವರೆಗೂ ಅವಕಾಶ ನೀಡಿ.

ನ್ಯಾಯಾಧಿಶರು – ಓಕೆ.. ಆಕ್ಷೇಪಣೆ ಸಲ್ಲಸಲು ನಿಮಗೆ ನಾಳೆಯವರೆಗೆ ಕಾಲಾವಕಾಶ ನೀಡುತ್ತಿದ್ದೇವೆ.
ನ್ಯಾಯಾಧೀಶರು – ನಲಪಾಡ್ ಮತ್ತು ಇತರೆ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗುತ್ತಿದೆ. ಇದನ್ನೂ ಓದಿ: ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!

ಸಿಟಿ ಸಿವಿಲ್ ಕೋರ್ಟ್ ಕಲಾಪ ಹೀಗಿತ್ತು:
ನಲಪಾಡ್ ಪರ ವಕೀಲರು ಸಲ್ಲಿಸಿದ್ದ ಜಾಮಿನು ಅರ್ಜಿ ವಿಚಾರಣೆ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ನ್ಯಾಯಾಲಯದಲ್ಲಿ ವಿದ್ವತ್ ತಂದೆ ಸಹ ಹಾಜರಿದ್ದರು.

ಉದ್ಯಮಿ ಅಲಂಪಾಶಾ ಪರ ವಕೀಲ – ಆಡಳಿತಾರೂಢ ಪಕ್ಷದ ಶಾಸಕರ ಪುತ್ರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಸರ್ಕಾರ ಪರ ಇದ್ದಾರೆ. ವಾದ ಮಂಡಿಸುತ್ತಿರುವ ವಕೀಲರು ಸರ್ಕಾರ ಪರ ಇದ್ದಾರೆ. ಹೀಗಾಗಿ ಜನಸಾಮಾನ್ಯರ ಪರವಾಗಿ ನಮ್ಮ ವಾದ ಮಂಡಿಸಲು ಅವಕಾಶ ನೀಡಿ.

ನ್ಯಾಯಾಧೀಶರು – ಜಾಮೀನು ಅರ್ಜಿಯಲ್ಲಿ ಸೆಕ್ಷನ್ 307 ಉಲ್ಲೇಖವಿಲ್ಲ. ಅರ್ಜಿ ತಿದ್ದುಪಡಿ ಮಾಡಿ.
ನಲಪಾಡ್ ಪರ ವಕೀಲ– ಅರ್ಜಿ ತಿದ್ದುಪಡಿ ಮಾಡಿ 307 ಸೆಕ್ಷನ್ ಸೇರಿಸಿ ನಂತರ ತಿದ್ದುಪಡಿ ಪತ್ರ ಸಲ್ಲಿಸಿದರು.

ವಿದ್ವತ್ ತಂದೆ – ನಲಪಾಡ್ ಜಾಮೀನು ಅರ್ಜಿ ವೇಳೆ ನನ್ನ ವಾದವನ್ನು ಸಹ ಪರಿಗಣಿಸಿ ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದರು.
ನ್ಯಾಯಾಧೀಶರು – ಅಲಂಪಾಶಾ, ವಿದ್ವತ್ ತಂದೆಯ ಅರ್ಜಿಯನ್ನು ವಿಚಾರಣೆ ವೇಳೆ ಪರಿಗಣಿಸಬೇಕೋ, ಅಥವಾ ಬೇಡವೋ ಎಂಬ ಬಗ್ಗೆ ನಾಳೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಶುಕ್ರವಾರ ಜಾಮೀನು ಅರ್ಜಿ ಕೈಗೆತ್ತಿಕೊಳ್ಳಲಾಗುವುದು. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

https://www.youtube.com/watch?v=p8o_3v5-ZYs

https://www.youtube.com/watch?v=XE5CFfnOvx0

https://www.youtube.com/watch?v=RtMFKdQtfME

 

Share This Article
Leave a Comment

Leave a Reply

Your email address will not be published. Required fields are marked *