ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ

Public TV
1 Min Read

ಬೆಂಗಳೂರು: ಚುನಾವಣೆ (Election) ಹಿನ್ನೆಲೆ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ರೋಡ್ ಶೋ (Road Show) ಹಾಗೂ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದಾರೆ. ಏಪ್ರಿಲ್ 29 ರಂದು ಮೋದಿ (Narendra Modi) ಬೆಂಗಳೂರಿನಲ್ಲಿ ನಡೆಯುವ ಮೆಗಾ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ಈ ಮೆಗಾ ರೋಡ್ ಶೋ ಬೆಂಗಳೂರಿನ (Bengaluru) ಮಾಗಡಿ ರಸ್ತೆಯ ನೈಸ್ ಜಂಕ್ಷನ್‌ನಿಂದ ಸುಂಕದಕಟ್ಟೆ ತನಕ ನಡೆಯಲಿದೆ. ರೋಡ್ ಶೋ ಬಳಿಕ ಮೋದಿ ಅಂದು ರಾತ್ರಿ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ‘ಕೈ’ ಬಂಡಾಯ ಶಮನ – ಗಂಗಾಂಬಿಕೆ ನಾಮಪತ್ರ ವಾಪಸ್‌

ಏಪ್ರಿಲ್ 30ರಂದು ಕೋಲಾರ, ಚನ್ನಪಟ್ಟಣ ಹಾಗೂ ಮೈಸೂರು ಜಿಲ್ಲೆಗಳಲ್ಲಿ ನಡೆಯುವ ಬೃಹತ್ ಸಮಾವೇಶಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ

Share This Article