ನೆಹರೂ ದಾಖಲೆ ಸರಿಗಟ್ಟಿದ ಮೋದಿ – ಪ್ರಮಾಣವಚನದಲ್ಲಿ ʼನಮೋʼ ಧರಿಸಿದ್ದ ಉಡುಗೆ ವಿಶೇಷತೆ ಏನು?

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಸತತ ಮೂರನೇ ಬಾರಿಗೆ ಪ್ರಮಾಣ ವಚನ (Oath Taking Ceremony) ಸ್ವೀಕರಿಸಿದ್ದು, ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಮಾಣವಚನ ಸ್ವೀಕಾರದ ವೇಳೆ ಮೋದಿ ಬಿಳಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಜಾಕೆಟ್ ಹೊಂದಿರುವ ಪೈಜಾಮ ಧರಿಸಿದ್ದರು.

ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಉಡುಗೆಗೆ ಮ್ಯಾಚ್ ಆಗುವಂತೆ ಕಪ್ಪು ಬಣ್ಣದ ಬೂಟು ಧರಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಕರ್ನಾಟಕದ ನಾಲ್ವರು ಪ್ರಮಾಣವಚನ ಸ್ವೀಕಾರ

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಪಿಎಂ ಮೋದಿ ಅವರು ಬೀಜ್ ಗೋಲ್ಡನ್ ಜಾಕೆಟ್‌ನೊಂದಿಗೆ ಕ್ರೀಮ್ ಲೆನಿನ್ ಕುರ್ತಾ-ಪೈಜಾಮಾವನ್ನು ಧರಿಸಿದ್ದರು. 2019ರ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಬೀಜ್ ಜಾಕೆಟ್ ಹೊಂದಿದ್ದ ಕುರ್ತಾ-ಪೈಜಾಮ ಧರಿಸಿದ್ದರು. ಇದನ್ನೂ ಓದಿ: ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ

ಪ್ರಮುಖ ಕಾರ್ಯಕ್ರಮಗಳಲ್ಲಿ ನರೇಂದ್ರ ಮೋದಿಯವರು ಹೆಚ್ಚು ಕುರ್ತಾ-ಪೈಜಾಮ ಜೊತೆಗೆ ಬಂಧಗಾಲಾ ಜಾಕೆಟ್‌ಗಳನ್ನು ಧರಿಸಲು ಇಚ್ಛಿಸುತ್ತಾರೆ. ಸ್ವಾತಂತ್ರ‍್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ವರ್ಣರಂಜಿತ ಪೇಟಗಳನ್ನು ಧರಿಸುವುದಕ್ಕೆ ಮೋದಿ ಹೆಸರುವಾಸಿವಾಗಿದ್ದಾರೆ. ಇದನ್ನೂ ಓದಿ: 4 ಬಾರಿ ಸಿಎಂ, 6 ಬಾರಿ ಸಂಸದ – ಮಧ್ಯಪ್ರದೇಶದ ಮಾಮಾ ಈಗ ಕೇಂದ್ರ ಸಚಿವ

Share This Article