ನಾಟಕದಲ್ಲಿ ಸಿದ್ದರಾಮಯ್ಯಗೆ ಅವಮಾನ- ರಂಗಾಯಣದ ವಿರುದ್ಧ ಅಭಿಮಾನಿಗಳ ಆಕ್ರೋಶ

Public TV
1 Min Read

ಮೈಸೂರು: ರಂಗಾಯಣದಲ್ಲಿ(Rangayana) ನಡೆದ ನಾಟಕವೊಂದರಲ್ಲಿ ಮಾಜಿ ಸಿದ್ದರಾಮಯ್ಯ(Siddaramaiah) ಮತ್ತು ಅವರ ಆಡಳಿತದಲ್ಲಿ ಜಾರಿಗೆ ತಂದ ಅನ್ನಭಾಗ್ಯ (Anna Bhagya) ಯೋಜನೆ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಿರ್ದೇಶಕ ಕಾರ್ತಿಕ್ ಉಪಮನ್ಯ ನಿರ್ದೇಶನದಲ್ಲಿ ಮೂಡಿಬಂದ ಡಾ.ಚಂದ್ರಶೇಖರ್ ಕಂಬಾರರು ರಚಿಸಿದ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನದಲ್ಲಿ “ಅನ್ನಭಾಗ್ಯ ಕೊಟ್ಟು ಸೋಂಬೇರಿ ಮಾಡಿದ್ರಿ. ಈ ಬಾರಿ ಬಾದಾಮಿನು ಸಿಕ್ಕಲ್ಲ. ಗೊರಕೆ ಹೊಡೆದು ರಾಜ್ಯ ಹಾಳುಮಾಡಿದ್ದೀರಿ” ಎಂಬ ಸಂಭಾಷಣೆಗಳನ್ನು ಸೇರಿಸಲಾಗಿದೆ. ಇದನ್ನೂ ಓದಿ: ಸಿನಿಮಾಗಳಿಗೆ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಅಧಿಕೃತ ಘೋಷಣೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ʼಕೇಡಿ ಅಂಕಲ್ʼ ಎಂದು ವ್ಯಂಗ್ಯ ಮಾಡಲಾಗಿದೆ ಎಂದು ನಾಟಕ ಪ್ರದರ್ಶನ ಅಂತ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಕುರುಬ ಸಂಘದ ಅಧ್ಯಕ್ಷ ಸುಬ್ರಮಣ್ಯ ಎಂಬುವರು ಜಯಲಕ್ಷ್ಮಿಪುರಂ ಠಾಣೆಗೆ ದೂರು ಕೂಡ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *