ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಶುರು – `ಆಪರೇಷನ್ ಅಭ್ಯಾಸ್’ ಹೆಸರಲ್ಲಿ ಅಣಕು ಕಾರ್ಯಾಚರಣೆ

Public TV
1 Min Read

ಬೆಂಗಳೂರು: ಕೇಂದ್ರ ಗೃಹ ಸಚಿವಾಯಲದ (Union Home Ministry) ಸೂಚನೆ ಮೇರೆಗೆ ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ (Mock Drill)(ಅಣುಕು ಕಾರ್ಯಾಚರಣೆ) ಆರಂಭವಾಗಿದೆ.

ಬೆಂಗಳೂರಿನ (Bengaluru)35 ಕಡೆಗಳಲ್ಲಿ ಸೈರನ್ ಮೊಳಗಿದ್ದು, ಆಪರೇಷನ್ ಅಭ್ಯಾಸ್ ಹೆಸರಲ್ಲಿ ನಾಗರಿಕ ಅಣುಕು ಪ್ರದರ್ಶನ ಆರಂಭವಾಗಿದೆ. ಗೆಸ್ಟ್ ಹೌಸ್‌ನಲ್ಲಿ ಬೆಂಕಿ ಬಿದ್ದಾಗ ಹೇಗೆ ರಕ್ಷಣೆ ಮಾಡಬೇಕು? ಸಮುದ್ರ ತೀರದಲ್ಲಿ ಯಾವ ರೀತಿ ಕಾರ್ಯಾಚರಣೆ ಇರುತ್ತದೆ? ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು? ಮಾನಸಿಕ ಸ್ಥೈರ್ಯ ಹೇಗೆ ತುಂಬಬೇಕು? ಎಂಬುದರ ಅಣಕು ಕಾರ್ಯಾಚರಣೆ ನಡೆಯುತ್ತಿದೆ.ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ‘ಆಪರೇಷನ್‌ ಸಿಂಧೂರ’ ಬಗ್ಗೆ ವಿವರಿಸಿದ ಮೋದಿ

ಬೋಟ್ ರೆಸ್ಕ್ಯೂಗೆ ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ ಹಾಗೂ ಆಲ್ ಇಂಡಿಯಾ ವಾಟರ್ ರೆಸ್ಕ್ಯೂ ಟೀಂನಿಂದ ಕಾರ್ಯಾಚರಣೆ ನಡೆಯುತ್ತಿದೆ. ಹಲಸೂರು ಕೆರೆಯಲ್ಲಿ ನಡೆಯುತ್ತಿರುವ ಬೋಟ್ ರೆಸ್ಕ್ಯೂ ನೋಡಲು ಬಂದ ಗೃಹ ಸಚಿವ ಪರಮೇಶ್ವರ್ ಹಾಗೂ ಬಿಜೆಪಿ ಸಂಸದ ಎಂಪಿ ಸುಧಾಕರ್ ಆಗಮಿಸಿದ್ದು, ಅಣುಕು ಕವಾಯತು ವೀಕ್ಷಿಸುತ್ತಿದ್ದಾರೆ.

ಏ.22ರಂದು ಮಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ವಿವಿಧ ತುರ್ತು ಪರಿಸ್ಥಿತಿಯಲ್ಲಿ ದೇಶದ ಜನರನ್ನ ಸಿದ್ಧಗೊಳಿಸುವ ಉದ್ದೇಶದಿಂದಾಗಿ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.

ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ನಾಗರಿಕರಿಗೆ ತರಬೇತಿ ನೀಡುವುದು ಈ ಕವಾಯತುಗಳ ಪ್ರಮುಖ ಅಂಶವಾಗಿರುತ್ತದೆ. ವಾಯುದಾಳಿ ಸೈರನ್ ಮತ್ತು ವಿದ್ಯುತ್ ಕಡಿತದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದರ ಮೇಲೆ ಈ ಕವಾಯತುಗಳ ಉದ್ದೇಶವಾಗಿರುತ್ತದೆ.ಇದನ್ನೂ ಓದಿ: ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್

Share This Article