RCB-SRH ಪಂದ್ಯದಲ್ಲಿ ಫೋನ್ ಕಳ್ಳತನ – 18 ಲಕ್ಷದ 28 ಮೊಬೈಲ್ ವಶಕ್ಕೆ, ಅಪ್ರಾಪ್ತರು ಸೇರಿ ಮೂವರು ಅರೆಸ್ಟ್‌

1 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ-ಎಸ್‌ಆರ್‌ಹೆಚ್ (RCB-SRH) ಪಂದ್ಯದಲ್ಲಿ ಕಳುವಾಗಿದ್ದ ಮೊಬೈಲ್‌ಗಳ ಪೈಕಿ ಪೊಲೀಸರು 18 ಲಕ್ಷ ರೂ. ಮೌಲ್ಯದ 28 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ (ಮಾ.28) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು-ಹೈದರಾಬಾದ್ ಐಪಿಎಲ್ ಪಂದ್ಯ ನಡೆದಿತ್ತು. ಈ ವೇಳೆ ಅಭಿಮಾನಿಗಳ ಮೊಬೈಲ್‌ಗಳನ್ನು ಕದಿಯಲಾಗಿತ್ತು. ಮ್ಯಾಚ್ ನೋಡಲು ಖುಷಿಯಾಗಿ ಬಂದಿದ್ದ ಅಭಿಮಾನಿಗಳು ಮೊಬೈಲ್ ಕಳೆದುಕೊಂಡು ಕಣ್ಣೀರು ಹಾಕುತ್ತಾ ಮನೆ ಕಡೆ ಹೋಗಿದ್ದರು. ಈ ಸಂಬ<ಧ ಕಬ್ಬನ್‌ಪಾರ್ಕ್ ಪೊಲೀಸರು 12 ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: KUWJ ವಾರ್ಷಿಕ ಪ್ರಶಸ್ತಿ ಪ್ರಕಟ – ಅರುಣ್ ಬಡಿಗೇರ್‌ಗೆ ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ

ಎಫ್‌ಐಆರ್ ದಾಖಲಾದ ಕೇವಲ ಎರಡೇ ದಿನದಲ್ಲಿ 18 ಲಕ್ಷ ರೂ. ಮೌಲ್ಯದ 21 ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೊಬೈಲ್ ಕಳ್ಳತನ ಮಾಡಿದ್ದ ಓರ್ವ ಆರೋಪಿ ಮತ್ತು ಮೂವರು ಬಾಲಕರನ್ನ ಅರೆಸ್ಟ್ ಮಾಡಿದ್ದಾರೆ. ಮ್ಯಾಚ್ ಹಾಗೂ ಜನಜಂಗುಳಿ ಹೆಚ್ಚಾಗಿ ಸೇರುವಂತಹ ಜಾಗಗಳನ್ನೇ ಟಾರ್ಗೆಟ್ ಮಾಡಿ, ಅಪ್ರಾಪ್ತರನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸ್ತಿರೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

Share This Article