ಹಿಂಡಲಗಾ ಜೈಲಿನ ಜಾಮರ್‌ನಿಂದ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ – ಕಾಲ್‌ಗೆ ಪರದಾಡುತ್ತಿದ್ದಾರೆ ಜನ

Public TV
1 Min Read

ಬೆಳಗಾವಿ: 2ಜಿ ಜಾಮರ್‌ ಬದಲಾಯಿಸಿ ಹಿಂಡಲಗಾ ಜೈಲಿನಲ್ಲಿ (Hindalga Jail) 5ಜಿ ಜಾಮರ್‌ (Jammer) ಅಳವಡಿಸಿದ್ದರಿಂದ ಸಮೀಪದ ಗ್ರಾಮಸ್ಥರಿಗೆ ಈಗ ಸಮಸ್ಯೆಯಾಗುತ್ತಿದೆ.

ಜಾಮರ್ ಅಳವಡಿಕೆಯಿಂದ ಜೈಲು ಪಕ್ಕದ ಹಳ್ಳಿಗಳಾದ ವಿಜಯನಗರ, ಗಣೇಶಪುರ,ಬೆನಕನಹಳ್ಳಿ ಸೇರಿದಂತೆ ಹಿಂಡಲಗಾ ಗ್ರಾಮಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ.‌

ಸರ್ಕಾರಿ ಕಚೇರಿಗಳಲ್ಲಿ ನೆಟ್‌ವರ್ಕ್‌ ಸಿಗದೇ ಸರ್ವರ್ ಡೌನ್ ಆಗುತ್ತಿದೆ. ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೂ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.‌

ಜೈಲಿನಲ್ಲಿ ಖೈದಿಗಳ ಮೊಬೈಲ್‌ ಬಳಕೆಗೆ ಬ್ರೇಕ್ ಹಾಕಬೇಕು ಎನ್ನುವ ನಿಟ್ಟಿನಲ್ಲಿ ಜೈಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಆದರೆ ಇದರಿಂದ ಖೈದಿಗಳಿಗಿಂತ ಹೊರಗಿರುವ ಜನಸಾಮಾನ್ಯರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಇದನ್ನೂ ಓದಿ: ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ – ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ

ಕೇದ್ರ ಸಚಿವ ನಿತಿನ್ ಗಡ್ಕರಿಗೆ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಖೈದಿಯೋರ್ವ ಜೀವ ಬೆದರಿಕೆ ಹಾಕಿದ್ದ. ಇದನ್ನು ಮನಗಂಡು ಜೈಲಧಿಕಾರಿಗಳು ಜಾಮರ್ ಅಳವಡಿಕೆಗೆ ಕ್ರಮ ಕೈಗೊಂಡಿದ್ದಾರೆ.

ಅಳವಡಿಕೆಯಾಗಿರುವ ಜಾಮರ್‌ ಫ್ರಿಕ್ವೆನ್ಸಿ ಕಡಿಮೆ ಮಾಡಿ ಎಂದು ಜೈಲಾಧಿಕಾರಿಗಳಿಗೆ ಜನಸಾಮಾನ್ಯರು ಮನವಿ ಮಾಡಿದ್ದಾರೆ.

 

Share This Article