ಹಾಡು ಕೇಳುತ್ತಿದ್ದಾಗ ಮೊಬೈಲ್ ಸ್ಫೋಟ!

Public TV
0 Min Read

ವಿಜಯಪುರ: ಹಾಡು ಕೇಳುತ್ತಿದ್ದಾಗ ಮೊಬೈಲ್‍ವೊಂದು ಸ್ಫೋಟಗೊಂಡ ಘಟನೆ ಇಂಡಿ ತಾಲೂಕಿನ ಅಥರ್ಗಾ ಎಲ್.ಟಿ 1ರಲ್ಲಿ ನಡೆದಿದೆ.

ಪ್ರಕಾಶ ರಾಠೋಡ್ ಅವರಿಗೆ ಸೇರಿದ್ದ ಐಟೆಲ್ ಕಂಪೆನಿಯ ಬೆಸಿಕ್ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.

ಪ್ರಕಾಶ್ ಅವರು 5 ತಿಂಗಳ ಹಿಂದಷ್ಟೇ 1,500 ರೂ. ನೀಡಿ, ಐಟೆಲ್ ಕಂಪೆನಿಯ ಮೊಬೈಲ್ ಖರೀದಿ ಮಾಡಿದ್ದರು. ಇಂದು ಬೆಳಗ್ಗೆ ಚಾರ್ಜ್ ಮಾಡಿ, ನಂತರ ಮ್ಯೂಸಿಕ್ ಆನ್ ಮಾಡಿ ಕಿಟಕಿಯ ಮೇಲೆ ಮೊಬೈಲ್ ಇಟ್ಟು ಕೆಲಸ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿದೆ. ಘಟನೆಯು ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *