ಮೋದಿ ದೇಶದ ದೊಡ್ಡ ಫ್ರಾಡ್, ಹೀಗೆ ಮಾಡಿದ್ದಕ್ಕೆ ಟ್ರಂಪ್‌ 50% ಸುಂಕ ಹಾಕಿದ್ದು: ನಜೀರ್ ಅಹಮದ್

By
2 Min Read

– ತಡರಾತ್ರಿವರೆಗೂ ಪರಿಷತ್‌ನಲ್ಲಿ ಭಾರೀ ಗದ್ದಲ‌
– ಬಿಜೆಪಿ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ʻಕೈʼ ಸದಸ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಈ ದೇಶದ ದೊಡ್ಡ ಫ್ರಾಡ್‌ ಎನ್ನುವ ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌ (Naseer Ahmed) ಹೇಳಿಕೆ ಸದನದಲ್ಲಿ ಭಾರೀ ಕೋಲಾಹಲ ಎಬ್ಬಿಸಿತು. ಬಿಜೆಪಿ, ಕಾಂಗ್ರೆಸ್‌ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತಲ್ಲದೇ ತಡರಾತ್ರಿ ವರೆಗೂ ಬಿಜೆಪಿ ಸದಸ್ಯರಿಂದ ಪ್ರತಿಭಟನೆ (BJP Protest) ನಡೆಯಿತು. ಕೊನೆಗೆ ಸಭಾಪತಿ ಎಚ್ಚರಿಕೆ ಬಳಿಕ ನಜೀರ್‌ ಅಹ್ಮದ್‌ ಸದನಕ್ಕೆ ಕ್ಷಮೆಯಾಚಿಸಿದ್ರು.

ನಜೀರ್‌ ಹೇಳಿದ್ದೇನು?
ಮೋದಿ ಈ ದೇಶದ ದೊಡ್ಡ ಫ್ರಾಡ್, ಅದಾನಿ, ಅಂಬಾನಿಗೆ ದೇಶ ಮಾರಿರೋರು ಮೋದಿ. ವೋಟ್ ಚೋರಿ ಮಾಡಿ ಪ್ರಧಾನಿ ಆಗಿರೋದು ಮೋದಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

ಇದರಿಂದ ಕೆಂಡಾಮಂಡಲವಾದ ಬಿಜೆಪಿ ಸದಸ್ಯರು ನಜೀರ್ ಅಹಮದ್ ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಕ್ಷಮೆ ಕೇಳುವಂತೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು. ಸದನದಲ್ಲಿ ಗದ್ದಲ ಕೋಲಾಹಲ ತಡರಾತ್ರಿವರೆಗೂ ಮುಂದುವರಿದಿತ್ತು. ನಜೀರ್‌ರನ್ನ ಸದನದಿಂದ ಹೊರಗೆ ಹಾಕುವಂತೆ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು. ಇಷ್ಟಾದರೂ ತನ್ನ ಹೇಳಿಕೆಯಿಂದ ಹಿಂದೆ ಸರಿಯದ ನಜೀರ್‌, ಮೋದಿ ಫ್ರಾಡ್‌ ಅನ್ನೋದನ್ನ ಸಾಬೀತು ಮಾಡ್ತೀನಿ ಎಂದು ಸಮರ್ಥನೆ ಮಾಡಿಕೊಂಡರು.

ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಎಚ್ಚರಿಕೆ ನೀಡಿದರು, ಕ್ಷಮೆ ಕೇಳದಿದ್ದರೆ, ಸದನದಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡದರು. ಇದನ್ನೂ ಓದಿ: ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನಜೀರ್‌, ನನಗೆ ಬಹಳ ದುಖ ಆಗಿದೆ, ನನ್ನ ಕಸಿನ್ ಬ್ರದರ್ ಮನ್ಸೂರ್ ಅಲಿ ಖಾನ್ 32 ಸಾವಿರ ವೋಟಿನಿಂದ ಸೋತಿದ್ದಾರೆ. ಇದಕ್ಕೆ ವೋಟ್ ಚೋರಿ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೋದಿ ಚುನಾವಣೆಯಲ್ಲಿ ಫ್ರಾಡ್ ಮಾಡಿ ಪ್ರಧಾನಿ ಆಗಿದ್ದಾರೆ. ಹೀಗೆ ಮಾಡಿದ್ದಕ್ಕೆ 50% ಟ್ಯಾಕ್ಸ್ ಹಾಕಿದ್ದು ಟ್ರಂಪ್ ಎಂದು ಮತ್ತೆ ಲೇವಡಿ ಮಾಡಿದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಇಲ್ಲಿ ಚುನಾವಣೆ ನಡೆಯುತ್ತಿಲ್ಲ, ಬೇಕಿದ್ದರೆ ಹೊರಗೆ ಹೋಗಿ ಮಾತಾಡಿ ಎಂದು ಕಿಡಿ ಕಾರಿದರು. ಈ ವೇಳೆ ಸ್ವತಃ ಆಡಳಿತ ಪಕ್ಷದ ಸದಸ್ಯರಿಂದಲೇ ನಜೀರ್‌ ವಿರಿದ್ಧ‌ ಆಕ್ಷೇಪ ವ್ಯಕ್ತವಾಯಿತು. ಪ್ರಧಾನಿ ಬಗ್ಗೆ ಮಾತಾಡಿದ್ದು ಯಾರೇ ಆದರೂ ತಪ್ಪು ಎಂದು ಸಭಾ ನಾಯಕ ಭೋಸರಾಜು ಹೇಳಿದರು.

ಇದು ಒಳ್ಳೆ ಸಂಸ್ಕೃತಿ ಅಲ್ಲ, ಆಡಿದ ಮಾತು ಹಿಂಪಡೆಯಿರಿ ಎಂದ ಸಭಾಪತಿ ಹೇಳಿದರು. ಕೊನೆಗೆ ಆಕ್ರೋಶಕ್ಕೆ ಮಣಿದ ನಜೀರ್‌ ಕ್ಷಮೆ ಕೋರಿದರು. ನೋಡಿ ನಾನು ನೋವಿನಿಂದ ಹೇಳಿದ್ದು ನಿಜ, ಮೋದಿ ಪಾಲಿಸಿ ಮೋದಿ ಕಾರ್ಯಕ್ರಮಗಳಿಂದ ನನಗೆ ನೋವಾಗಿದೆ. ನಾನು ನಿಮ್ಮ ಪೀಠಕ್ಕೆ ಬೆಲೆ ಕೊಡುತ್ತೇನೆ. ಬಾಯಿಯಿಂದ ಏನಾದರೂ ಹೇಳಬಹುದು ಆದ್ರೆ ಹೃದಯದಿಂದ ಬರುವುದಿಲ್ಲ ನಿಮಗೆ ದುಃಖ ಆಗಿದ್ದರೆ ಮಾತು ಹಿಂಪಡೆಯುತ್ತೇನೆ ಎಂದರು. ಬಳಿಕ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು. ಇದನ್ನೂ ಓದಿ: ಬಿಜೆಪಿಯ ಮತ್ತೊಂದು ತಂಡದಿಂದ ಇಂದು `ಧರ್ಮಸ್ಥಳ ಚಲೋ’ – 500 ಕಾರುಗಳಲ್ಲಿ ಹೊರಟ ಕಾರ್ಯಕರ್ತರು

Share This Article