ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು: ಹೆಚ್.ವಿಶ್ವನಾಥ್

Public TV
2 Min Read

ಬೆಂಗಳೂರು: ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆಶಿ ಪರ ಬಿಜೆಪಿ MLC ಹೆಚ್.ವಿಶ್ವನಾಥ್ (H.Vishwanath) ಬ್ಯಾಟಿಂಗ್ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ನಡೆಯುತ್ತಿರೋ ಪವರ್ ಶೇರಿಂಗ್ ಕಿತ್ತಾಟ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,‌ ಡಿಕೆಶಿಗೆ ಸ್ವಲ್ಪ ದಿನವಾದ್ರು ಸಿಎಂ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಕೊಡಬೇಕು.136 ಸ್ಥಾನ ಕಾಂಗ್ರೆಸ್‌ಗೆ ಬಂದು ಬಹುಮತದ ಸರ್ಕಾರ ರಚನೆ ಆಗಬೇಕಾದ್ರೆ ಡಿಕೆ ಶಿವಕುಮಾರ್ ಪಾತ್ರ ಬಹಳ ಇದೆ. ಕಾಂಗ್ರೆಸ್‌ಗೆ ಒಕ್ಕಲಿಗ ಸಮುದಾಯ ಕೂಡ ಡಿಕೆಶಿ ಸಿಎಂ ಆಗ್ತಾರೆ ಅಂತ ಮತ ಹಾಕಿದ್ದಾರೆ. ಹೀಗಾಗಿ, ಅವರಿಗೆ ಸಿಎಂ ಸ್ಥಾನ ಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಕುಸುಮಾ Vs ಮುನಿರತ್ನ ಫೈಟ್‌ – ಪಟಾಕಿ ಹಂಚಲು ಪೊಲೀಸರಿಂದ ತಡೆ

5 ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳೋದು ಭಂಡತನ. ಸಿದ್ದರಾಮಯ್ಯ ನಾನು ಸಿಎಂ ಅಗಿ ಇರುತ್ತೇನೆ ಅಂತ ಹೇಳಬಾರದು. ರಾಜಕೀಯ ಪಕ್ಷ ಮತ್ತು ಸರ್ಕಾರ ಎಂದರೆ ಎಲ್ಲರೂ ಒಟ್ಟಾಗಿ ಹೋಗಬೇಕು. ರಾಜಕೀಯ ಪಕ್ಷ ಎಂದರೆ ಎಲ್ಲರೂ ಶೇರ್ ಮಾಡಿಕೊಂಡು ಹೋಗಬೇಕು. 30 ಜನರಿಗೆ ಈಗ ಅಧಿಕಾರ ಕೊಟ್ಟಿಲ್ಲವಾ? ಮಂತ್ರಿಗಳು ಇಲ್ಲವೇ? ಸಿಎಂ ಕೂಡಾ ಒಬ್ಬ ಮಂತ್ರಿಯೆ. ಆದರೆ, ಅವರು ಲೀಡ್ ಮಾಡ್ತಾರೆ ಅಷ್ಟೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂಬ ಪುತ್ರ ಯತೀಂದ್ರ ‌ಹೇಳಿಕೆಗೆ ತಿರುಗೇಟು ಕೊಟ್ಟ ವಿಶ್ವನಾಥ್, ಸಿದ್ದರಾಮಯ್ಯಗೆ ಬೇರೆ ಯಾರ ಸಪೋರ್ಟ್ ಇಲ್ಲ. ಅವರ ಮಗನೇ ಸಪೋರ್ಟ್. ಅಪ್ಪನಿಗೆ ಮಗನೇ ಸಪೋರ್ಟ್. ಆಪ್ತ ಸಚಿವರು ಒಂದು ತಿಂಗಳಿಂದ ಸಿದ್ದರಾಮಯ್ಯಗೆ ಬೆಂಬಲ ಕೊಡ್ತಿಲ್ಲ. ಅವರೇ ಸಿಎಂ ಅಂತ ಅವರ ಬೆಂಬಲಿಗರು ಹೇಳ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಮುನಿರತ್ನ ಆಪ್ತ ಮಾತು – ಭಾಷಣದ ಆರಂಭದಲ್ಲೇ ನೆಚ್ಚಿನ ಸಿಎಂ ಎಂದ ಶಾಸಕ

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಹಿಂದೆ ಇದ್ದರು. ಈಗ 2.5 ವರ್ಷ ಇದ್ದಾರೆ. ಹೈಕಮಾಂಡ್ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಖಂಡಿತ ಕೊಡಬೇಕು. ಯಾಕೆ ಕೊಡಬಾರದು? ಸಿದ್ದರಾಮಯ್ಯಗೆ 5 ವರ್ಷ ಈಗ 2.5 ಕೊಡಲಾಗಿದೆ. ಬೇರೆ ಅವರಿಗೆ ಕೊಡಿ. ಎಲ್ಲಾ ನಾನೇ ನಾನೇ ಅಂದರೆ ಹಾಗೆ ಆಗೊಲ್ಲ ಎಂದು ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Share This Article