ಚಿಪ್ಪಲ್ಲಿ ಕಾಫಿ ಕೊಡೋ ಕಾಲದಲ್ಲಿ ಸಹಪಂಕ್ತಿ ಭೋಜನ ಎತ್ತಿಹಿಡಿದಿದ್ದು ವಿರೇಂದ್ರ ಹೆಗ್ಗಡೆಯವ್ರು: ಸಿ.ಟಿ ರವಿ

Public TV
1 Min Read

– ಎಸ್‍ಡಿಪಿಐ ಧರ್ಮಸ್ಥಳದ ವಿರುದ್ಧ ಹೋರಾಡುತ್ತಿದೆ

ಚಿಕ್ಕಮಗಳೂರು: ಚಿಪ್ಪಲ್ಲಿ ಕಾಫಿ ಕೊಡೋ ಕಾಲದಲ್ಲಿ ಸಹಪಂಕ್ತಿ ಭೋಜನ ಎತ್ತಿಹಿಡಿದಿದ್ದು ವಿರೇಂದ್ರ ಹೆಗ್ಗಡೆಯವರು ಎಂದು ಎಂಎಲ್‍ಸಿ ಸಿ.ಟಿ.ರವಿ (C.T Ravi) ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಧರ್ಮಸ್ಥಳದಲ್ಲಿ ಮೃತದೇಹಗಳಿಗಾಗಿ ಉತ್ಖನನ (Dharmasthala Mass Burial Case) ನಡೆಯುತ್ತಿದೆ. ಪ್ರಾಮಾಣಿಕವಾಗಿ-ಪಾರದರ್ಶಕವಾಗಿ ತನಿಖೆಯಾಗಬೇಕು. ತನಿಖೆಗೆ ಮೊದಲೇ ಆಧಾರ ಇಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋಕೆ ಯಾರಿಗೂ ಅಧಿಕಾರವಿಲ್ಲ ಎಂದಿದ್ದಾರೆ. ಇದನ್ನೂ ಓದಿ: Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

ಎಸ್‍ಡಿಪಿಐ ಕಮ್ಯುನಲ್ ಟ್ರ್ಯಾಕ್ ರೆಕಾರ್ಡ್ ಸಂಘಟನೆ ಅದು ಧರ್ಮಸ್ಥಳದ ವಿರುದ್ಧ ಹೋರಾಡುತ್ತಿದೆ. ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಂತ್ರವೇ ನಡೆದಿದೆ. ನಾವು ವೀರೇಂದ್ರ ಹೆಗ್ಗಡೆಯವರನ್ನು ದೇವತಾ ಮನುಷ್ಯ ಎಂದು ಭಾವಿಸಿದ್ದೀವೆ. ಪರೋಪಕಾರ ಜೀವನದ ಅವರ ಬದುಕಿಗೆ ಅಷ್ಟು ಅರ್ಥವಿದೆ. ಅವರಿಂದ ಎಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿವೆ ಎಂದಿದ್ದಾರೆ.

ಕೊಲೆ, ಆತ್ಮಹತ್ಯೆ, ಅಪರಿಚಿತ ಶವ ಇದರ ಬಗ್ಗೆ ತನಿಖೆಯಾಗಲಿ. ತಪ್ಪು ಯಾರು ಮಾಡಿದ್ರೂ ತಪ್ಪೇ, ಆದರೆ  ಈ ಪ್ರಕರಣದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಇದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

Share This Article