ರಾಮನ ಮನೆಯ ತೆರಿಗೆ ರಹೀಮನ ಮನೆಗೆ: ಶಾಸಕ ಚನ್ನಬಸಪ್ಪ

Public TV
1 Min Read

– ಗಾಂಧಿ ತತ್ವ ಗಾಳಿಗೆ ತೂರಿ ಮದ್ಯ ಮಾರಾಟಕ್ಕೆ ಅವಕಾಶ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸಭೆಯಲ್ಲಿ ಮಂಡಿಸಿದ ತಮ್ಮ 15ನೇ ಬಜೆಟ್‍ನಲ್ಲಿ ಗ್ಯಾರೆಂಟಿಗಳ ಅರ್ಥವಿಲ್ಲದ ಆರ್ಥಿಕ ಕೂಪದಲ್ಲಿ ಬಿದ್ದಿರುವುದು ಎದ್ದು ಕಾಣುತ್ತಿದೆ. ಹಿಂದೂಗಳಿಗೆ ಬಿಡಿಗಾಸು ನೀಡದೆ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ ತಮ್ಮ ಬಾಂಧವರಿಗೆ ನಿಷ್ಠೆಯನ್ನು ತೋರಿಸಿದ್ದಾರೆ. ಈ ಮೂಲಕ ರಾಮನ ಮನೆ ತೆರಿಗೆಯನ್ನು ರಹೀಮನಿಗೆ ಕೊಟ್ಟಿದ್ದಾರೆ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ (MLA Channabasappa) ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಿಎಂ ತಮ್ಮ ತಪ್ಪಿಗೆ ತೇಪೆ ಹಾಕಲು ಕೇಂದ್ರದೆಡೆಗೆ ಬೆಟ್ಟು ಮಾಡುವ ಚಾಳಿಯನ್ನು ಮೈಗೂಡಿಸಿಕೊಂಡಿದ್ದಾರೆ. ಕೇಂದ್ರದ ಪಾಲು ಬಂದಿಲ್ಲವೆಂದು ಒಂದು ಸುಳ್ಳನ್ನೇ ನೂರು ಸಾರಿ ಪದೇ ಪದೇ ಹೇಳುತ್ತಾರೆ. ಇದರಿಂದ ಜನರನ್ನು ತಮ್ಮ ಸುಳ್ಳಿನಿಂದ ನಂಬಿಸಬಹುದು ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಐದು ಗ್ಯಾರಂಟಿ ಯೋಜನೆ ಪೂರೈಸಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ: ನಿಖಿಲ್

ಬಜೆಟ್‍ನಲ್ಲಿ (Karnataka Budget 2024) ಅಜನಾಂದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಕೊಡುತ್ತೇನೆ ಎಂದಿದ್ದು ನಮ್ಮ ಬಿಜೆಪಿ (BJP) ಸರ್ಕಾರದ ಕೊಡುಗೆಯನ್ನೇ ಪುನರುಚ್ಚರಿಸಿದ್ದಾರೆ. ಹಿಂದೂಗಳಿಗೆ ಬಿಡಿಗಾಸು ನೀಡದೆ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ ತಮ್ಮ ಬಾಂಧವರಿಗೆ ನಿಷ್ಠೆಯನ್ನು ತೋರಿಸಿದ್ದಾರೆ. ಆ ಮೂಲಕ ರಾಮನ ಮನೆ ತೆರಿಗೆಯನ್ನು ರಹೀಮನಿಗೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಧ್ಯರಾತ್ರಿ ಒಂದು ಗಂಟೆವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಗಾಂಧಿ ತತ್ವವನ್ನು ಗಾಳಿಗೆ ತೂರಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಪೆಟ್ಟನ್ನು ನೀಡಲು ಹೊರಟಿದ್ದಾರೆ. ಈ ಸರ್ಕಾರದಲ್ಲಿ ಯಾವುದೂ ನೆಟ್ಟಗಿಲ್ಲ ಎಂಬುದು ಬುರುಡೆ ಬಜೆಟ್‍ನಲ್ಲಿ ಕಾಣಬಹುದು ಎಂದಿದ್ದಾರೆ. ಇದನ್ನೂ ಓದಿ: 1983ರಿಂದ ನಾನು ವಿಧಾನಸಭೆಯಲ್ಲಿದ್ದೇನೆ.. ಬಜೆಟ್ ಮಂಡಿಸುವಾಗ ಯಾರೂ ವಾಕ್‌ಔಟ್ ಮಾಡಿರಲಿಲ್ಲ: ಬಿಜೆಪಿ ವಿರುದ್ಧ ಸಿಎಂ ಗರಂ

Share This Article