ಡಿಕೆಶಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಶಾಸಕ ಇಡಿ ಕಸ್ಟಡಿಯಲ್ಲಿ ಪರ್ಸನಲ್ ವೈದ್ಯ

Public TV
1 Min Read

ನವದೆಹಲಿ: ಸೆ.13ರವರೆಗೆ ಅಂದರೆ 9 ದಿನಗಳ ಕಾಲ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶ ಪ್ರಕಟಿಸಿದೆ. ಈ ಬೆನ್ನಲ್ಲೇ ಡಿಕೆಶಿಯವರು ಪರ್ಸನಲ್ ವೈದ್ಯರನ್ನು ಹೊಂದಲು ಮನವಿ ಮಾಡಿಕೊಂಡಿದ್ದು ಕೋರ್ಟ್ ಅನುಮತಿ ನೀಡಿದೆ.

ಡಿಕೆಶಿಯವರು ತಮ್ಮ ಪರ್ಸನಲ್ ಡಾಕ್ಟರ್ ಕುಣಿಗಲ್ ಶಾಸಕ ಡಾ ರಂಗನಾಥ್ ಅವರ ಹೆಸರನ್ನು ಸೂಚಿಸಿದ್ದಾರೆ. ರಂಗನಾಥ್ ಅವರು ಡಿ.ಕೆ.ಶಿವಕುಮಾರ್ ಅವರ ನಾದಿನಿಯ ಪತಿ. ಡಿಕೆಶಿ ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿಸಿದ್ದಲ್ಲದೇ, ಅವರ ಗೆಲುವಿಗೂ ಶ್ರಮಿಸಿದ್ದರು.

ಚುನಾವಣೆಯ ನಂತರ ವಿಧಾನಸಭಾ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ರಂಗನಾಥ್ ಅವರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಇದನ್ನೂ ಓದಿ: ನೋ ರಿಲೀಫ್ – ಸೆ.13ರವರೆಗೆ ಇಡಿ ಕಸ್ಟಡಿಗೆ ಡಿಕೆಶಿ

ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಡಾ.ಎಚ್.ಡಿ.ರಂಗನಾಥ್ ಅವರು, ಒಟ್ಟು 58,697 ಮತ ಪಡೆದು ಜಯಸಾಧಿಸಿದ್ದರು. ಬಿಜೆಪಿಯ ಡಾ.ಕೃಷ್ಣಕುಮಾರ ಅವರು 53,097 ಮತ ಪಡೆದು 5,600 ಮತಗಳ ಅಂತರದಲ್ಲಿ ಸೋತಿದ್ದರು.

ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು. ಆ ಬಳಿಕ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಇಂದು ಮಧ್ಯಾಹ್ನ ಕೋರ್ಟಿಗೆ ಡಿಕೆಶಿಯನ್ನು ಹಾಜರುಪಡಿಸಲಾಯಿತು. ಸಂಜೆ 7.12ರ ಸುಮಾರಿಗೆ 9 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *