ದೇವರ ಹಣದಲ್ಲೂ ಕಮಿಷನ್ ಪಡೀತಿದ್ದಾರೆ: ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಆರೋಪ

Public TV
1 Min Read

ತುಮಕೂರು: ಇಲ್ಲಿನ ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್‌ (JDS MLA Gauri Shankar) ದೇವಸ್ಥಾನಗಳ ಹಣವನ್ನೂ ಬಿಡದೇ ಕಮಿಷನ್ ಪಡೆಯುತಿದ್ದಾರೆ. ಅಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಕಮಿಷನ್ ದಂಧೆ ನಡೆಸುತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda)ಗಂಭೀರ ಆರೋಪ ಮಾಡಿದ್ದಾರೆ.

ಊರ್ಡಿಗೆರೆಯಲ್ಲಿ ನಡೆದ ಬಿಜೆಪಿ (BJP) ಸಮಾವೇಶದಲ್ಲಿ ಅವರು ಮಾತನಾಡಿದರು. ಊರ್ಡಿಗೆರೆ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಕಾಮಗಾರಿಗೆ ಕಮಿಷನ್ ಕೊಟ್ಟಿಲ್ಲ ಎಂದು ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ ಎಂದು ಆಪಾದಿಸಿದ್ದಾರೆ. ಬಯಲು ಆಂಜನೇಯ ಸ್ವಾಮಿ ದೇವರಿಗೆ ನನ್ನ ಕಾಲದಲ್ಲಿ 50 ಲಕ್ಷ ಬಿಡುಗಡೆ ಮಾಡಿದ್ದೆ. ಸೋತ ನಂತರವೂ 25ಲಕ್ಷ ಹಣ ಕೊಡಸಿದ್ದೆ. ಆದರೆ ಶಾಸಕರು 5 ಪೈಸೆ ಖರ್ಚು ಮಾಡಿಲ್ಲ ಕಮಿಷನ್ ಕೊಟ್ಟಿಲ್ಲ ಎಂದು ಮೂರು ವರ್ಷದಿಂದ ಆ ಹಣವನ್ನು ಹಾಗೆ ಇಟ್ಟುಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಗೆಲುವಿಗಾಗಿ ಆಂಜನೇಯನಿಗೆ ಆಫರ್: ಇದೇ ವೇಳೆ ತೀರಾ ಭಾವುಕತೆಗೆ ಒಳಗಾದ ಸುರೇಶ್ ಗೌಡ, ತನ್ನ ಗೆಲುವಿಗಾಗಿ ಬಯಲು ಆಂಜನೇಯನ ಸ್ವಾಮಿ ದೇವರಿಗೆ ಆಫರ್ ಕೊಟ್ಟಿದ್ದಾರೆ. ದೇವರೇ ನಿನ್ನಲ್ಲಿ ಶಕ್ತಿ ಇದ್ದರೆ, ಭಕ್ತಿ ಇದ್ದರೆ, ಪ್ರಮಾಣಿಕತೆ ಇದ್ದರೆ ನನ್ನನ್ನು 50 ಸಾವಿರ ಮತಗಳಿಂದ ಗೆಲ್ಲಿಸು ಎಂದು ವೇದಿಕೆ ಮೇಲೆ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಮಿಥುನ್ ರೈರನ್ನು ತರಾಟೆಗೆ ತೆಗೆದುಕೊಂಡ ನಟ ರಕ್ಷಿತ್ ಶೆಟ್ಟಿ

ಬಯಲು ಆಂಜನೇಯ ಸ್ವಾಮಿಯೇ ನಿನ್ನ ಕಾಮಗಾರಿಯಲ್ಲಿ ಕಮಿಷನ್ ತಿನ್ನುವ ಶಾಸಕ ಗೌರಿಶಂಕರ್ ನ ಸೋಲಿಸು, ಆಗ ನಾನು ಕೇವಲ 6 ತಿಂಗಳಲ್ಲಿ ನಿನ್ನ ಗೋಪುರ ಕಟ್ಟಿಸುತ್ತೇನೆ, ನಿನ್ನನ್ನ ಜಗತ್ ಪ್ರಸಿದ್ಧಿ ಮಾಡಿಸುತ್ತೇನೆ ಎಂದು ದೇವರಿಗೂ ಆಮಿಷ ಒಡ್ಡಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ್ ನಿಧನಕ್ಕೆ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರಿಂದ ಸಂತಾಪ

Share This Article
Leave a Comment

Leave a Reply

Your email address will not be published. Required fields are marked *