ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಈ ಬಾರಿ ಮಂತ್ರಿ ಸ್ಥಾನ ಸಿಗುತ್ತೆ: ನಾರಾಯಣಸ್ವಾಮಿ

1 Min Read

ಬೆಂಗಳೂರು: ನಾನೂ ಸಚಿವ ಸ್ಥಾನದ (Ministerial Position) ಆಕಾಂಕ್ಷಿ‌. ನನಗೆ ಈ ಬಾರಿ ಸಚಿವ ಸ್ಥಾನ ಸಿಗುತ್ತೆ ಅನ್ನೋ ವಿಶ್ವಾಸ ಇದೆ ಅಂತ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ (SN Narayanaswamy) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ.ನಮ್ಮ ಜಿಲ್ಲೆಯಲ್ಲಿ ನಾನು ಅತಿ ಹಿರಿಯ ಶಾಸಕ, ಕೋಲಾರ ಜಿಲ್ಲೆಗೆ ಅನೇಕ ವರ್ಷಗಳಿಂದ ಅವಕಾಶ ಕೊಟ್ಟಿಲ್ಲ. ಹಿಂದೆ ನಮಗೆ 2.5 ವರ್ಷಗಳ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಆಗ ಕೊಡೋದಾಗಿ ಹೇಳಿದ್ರು. ಸಿಎಂ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ (DK Shivakumar) ಅವರು 2ನೇ ಅವಧಿಗೆ ನೊಡೋಣ ಅಂತ ಹೇಳಿದ್ರು. ನನಗೆ ಈ ಬಾರಿ ಸಚಿವ ಸ್ಥಾನ ಸಿಗೋ ವಿಶ್ವಾಸ ಇದೆ‌ ಎಂದರು‌.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ‌. ಸಿದ್ದರಾಮಯ್ಯ ಅವರು ಸಿಎಂ ಆಗಿ ಇದ್ದಾರೆ. ಈಗ ಸ್ಥಾನ ಖಾಲಿ ಇಲ್ಲ. ಖಾಲಿ ಆದರೆ ನೋಡೋಣ. ಸಿಎಂ ಬದಲಾವಣೆ ಬಗ್ಗೆ ಮಾತಾಡೋದು ನಮ್ಮ ಕೈಯಲ್ಲಿ ಇಲ್ಲ. ಹೈಕಮಾಂಡ್ ಅದನ್ನ ನೋಡಿಕೊಳ್ಳುತ್ತದೆ‌. ಹೈಕಮಾಂಡ್ ಕೂಡಾ ಶಾಸಕರ ಅಭಿಪ್ರಾಯ ಪಡೆಯದೇ ಏನು ಮಾಡೊಲ್ಲ ಅಂತ ಅನ್ನಿಸುತ್ತೆ ಎಂದರು.

Share This Article