ಬೆಂಗಳೂರು: ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಆದರೆ ಇಂದಲ್ಲ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಿಎಂ ಆಗೇ ಆಗ್ತಾರೆ ಎಂದು ಕಾಂಗ್ರೆಸ್ ಶಾಸಕ ರಂಗನಾಥ್ (Ranganath) ತಿಳಿಸಿದ್ದಾರೆ.
5 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ನಾಯಕರ ಮಟ್ಟದ ಚರ್ಚೆ ಮಾಡ್ತಾರೆ. ರಾಜ್ಯ ಸರ್ಕಾರ ದೇಶದಲ್ಲಿ ಮುಖ್ಯವಾದ ಸ್ಥಾನದಲ್ಲಿದೆ ಎಂದರು. ಇದನ್ನೂ ಓದಿ: ರಾಹುಲ್ ಪತ್ರ – ಸರ್ಕಾರಿ ಪದವಿ ಕಾಲೇಜುಗಳಲ್ಲಿ 35 ವರ್ಷದ ಬಳಿಕ ವಿದ್ಯಾರ್ಥಿ ಚುನಾವಣೆಗೆ ಅನುಮತಿ?
ಬಿಜೆಪಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸರ್ಕಾರ ಬಡವರ ಜೊತೆ ಇದ್ದೇವೆ ಎಂದು ತೋರಿಸಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಹಿರಿಯರಿಗೆ ಯಾವ ರೀತಿ ಬಲ ಕೊಡಬೇಕು ಎಂದು ಮಾತಾಡಿರಬಹುದು ಎಂದು ಭಾವಿಸುತ್ತೇನೆ. ಬುಧವಾರವೂ ಸುರ್ಜೇವಾಲ ಅವರು ಶಾಸಕರ ಕಷ್ಟ ಸುಖ ಕೇಳಿದ್ದಾರೆ. ನಮ್ಮ ವಿಚಾರಗಳನ್ನ ತಿಳಿಸಿದ್ದೇವೆ. ಬಗೆಹರಿಯುವ ವಿಶ್ವಾಸ ಇದೆ ಎಂದು ನುಡಿದರು. ಇದನ್ನೂ ಓದಿ: 2029ಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರ್ತೀವಿ, ಬಿಜೆಪಿ ನಾಯಕರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್
ಸುರ್ಜೇವಾಲ ಮುಂದೆ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೀಡಿಯಾದವರೆಲ್ಲ ಫ್ರೆಂಡ್ಲಿಯಾಗಿ ಈಗ ಆಗಬೇಕು, ನಾಳೆ ಆಗಬೇಕು ಎಂದು ಹೊರಟಿದ್ದೀರಿ. ಶಿಸ್ತಿನ ಕಾಂಗ್ರೆಸ್ ಪಾರ್ಟಿಯಿದು. ಹೈಕಮಾಂಡ್ ನಾಯಕರು ಮಾನದಂಡ ತೆಗೆದುಕೊಂಡು ಯಾವ ಕಾಲಕ್ಕೆ ಏನು ನಿರ್ಧಾರ ಮಾಡಬೇಕು ಎಂಬ ಇತಿಹಾಸವಿದೆ ಎಂದರು. ಇದನ್ನೂ ಓದಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ, ಚರ್ಚೆ ಇಲ್ಲ: ಹೆಚ್.ಸಿ.ಮಹದೇವಪ್ಪ
ರಾಹುಲ್ ಗಾಂಧಿ ಅವರು ಸೂಕ್ತ, ಸಮರ್ಥ ನಾಯಕತ್ವ ತೆಗೆದುಕೊಂಡು ಹೋಗ್ತಾ ಇದ್ದಾರೆ. ಸಿಎಂ ಹೈಕಮಾಂಡ್ ಆದೇಶ, ಶಾಸಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೊಟ್ಟ ಪ್ರಣಾಳಿಕೆಯನ್ನು ಸಿಎಂ, ಡಿಸಿಎಂ ಮಾಡಿ ತೋರಿಸಿದ್ದಾರೆ. ಪವರ್ ಶೇರಿಂಗ್ ಬಗ್ಗೆ ಮಾತಾಡುವಷ್ಟು ದೊಡ್ಡವನು ನಾನಲ್ಲ. ಸಿಎಂ ಕುರ್ಚಿ ಖಾಲಿ ಇಲ್ಲ. ನಿಮ್ಮ ಕೆಲಸ ಮಾಡಿ ಎಂದು ಡಿಕೆಶಿಯವರೇ ಹೇಳ್ತಾ ಇದ್ದಾರೆ. ಯಾವ ಶಾಸಕರು, ಹಿರಿಯರು ಮಾತನಾಡಬಾರದು ಎಂದು ಹೇಳಿದರು.
ನನ್ನ ಹೇಳಿಕೆಯನ್ನ ನಾನು ಪ್ರತಿಪಾದನೆ ಮಾಡುತ್ತೇನೆ. ಯಾವ ರೀತಿ ಅಂದ್ರೆ ಡಿಕೆಶಿ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮ ಹಾಕಿದ್ದಾರೆ. ಹೋರಾಟ ಮಾಡಿದ್ದಾರೆ. ಇವತ್ತು 140 ಸ್ಥಾನ ಬರಲು ಡಿಕೆಶಿ ಪ್ರಮುಖ ಕಾರಣ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಇವತ್ತಲ್ಲ ನಾಳೆ, ಸಿಎಂ ಆಗೇ ಆಗುತ್ತಾರೆ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಮಿತಿಯಲ್ಲಿ ನಾವು ಇರುವುದು ರಾಜಕೀಯ ಧರ್ಮ. ಶಾಸಕರ ಬೆಂಬಲದ ಬಗ್ಗೆ ಸಿಎಂ ಮಾತಾಡಿರಲ್ಲ. ಯಾಕೆಂದರೆ ಸಿಎಂ ಅವರು ಹಿರಿಯರಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಶಾಸಕರೆಲ್ಲ ಸಂತೋಷದಲ್ಲಿದ್ದೇವೆ ಎಂದು ತಿಳಿಸಿದರು.