ಯಾರು ಆಕಸ್ಮಿಕವಾಗಿ ನಾಮಬಲದಲ್ಲಿ ಶಾಸಕ, ಸಚಿವ, ಸಿಎಂ ಆದ್ರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ: ಪ್ರೀತಂಗೌಡ

Public TV
2 Min Read

ಹಾಸನ: ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದರೆ ಅವರ ಬಾಯಿ ಚಪಲ ತೀರುತ್ತೆ ಹೊರತು ಸಂಘಟನೆಗೆ ಪರಿಣಾಮ ಬೀರಲ್ಲ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾಗಿ, ಸಚಿವರಾಗಿ ನಂತರ ಸಿಎಂ ಆದ್ರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಆರ್‌ಎಸ್‌ಎಸ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ಕಲಿಸಿಕೊಟ್ಟಿರೋದೆ ನೀಲಿಚಿತ್ರ ನೋಡೋದು ಎಂಬ ಹೆಚ್‍ಡಿಕೆ ಹೇಳಿಕೆಗೆ ಹಾಸನದಲ್ಲಿ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ, ಮಹರ್ಶಿ ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿದ್ರು. ಪ್ರಪಂಚದ ಆದರ್ಶ ಪುರುಷ ಎಂದರೆ ಶ್ರೀರಾಮಚಂದ್ರ ಎಂದು ಜಗತ್ತೇ ನಂಬಿದೆ. ಭಾರತದ ಪರಂಪರೆ ತಿಳಿಸಿಕೊಟ್ಟಿರುವ ಮಹರ್ಷಿಗಳಿಂದ ಪ್ರೇರಣೆ ಪಡೆದ ಸಂಘಟನೆ ಆರ್‌ಎಸ್‌ಎಸ್‌ ನಾವು ಆದರ್ಶ ಪುರಷರನ್ನು ಹಿಂಬಾಳಿಸುವ ಕಾರ್ಯಕರ್ತರು. ಹಾಗಾಗಿ ಯಾರೋ ಒಬ್ಬರು ಸಂಘಟನೆ ಬಗ್ಗೆ ಮಾತನಾಡಿದ ತಕ್ಷಣ ಅದರ ಶಕ್ತಿ ಕುಂದಲ್ಲ. ಮಾತನಾಡುವವರ ಬಾಯಿ ಚಪಲ ತೀರುತ್ತೆ ಹೊರತು ಸಂಘಟನೆಗೆ ಪರಿಣಾಮ ಬೀರಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

ಚುನಾವಣಾ ಮತಕ್ಕೋಸ್ಕರ, ರಾಜಕಾರಣಕ್ಕೋಸ್ಕರ ಏನು ಬೇಕಾದ್ರು ಮಾತನಾಡಬಹುದು ಎಂದು ರಾಜಕೀಯ ಪಕ್ಷಗಳು ಅಂದುಕೊಂಡಿದ್ರೆ ದುರ್ದೈವ. ನಮ್ಮ ದೇಶದ ಸಂಸ್ಕೃತಿ ಪರಂಪರೆ ಉಳಿಸುವ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡಬಾರದು. ಈ ಬಗ್ಗೆ ಹಿರಿಯರಾದ ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ ಈ ಹಿಂದೆ ಶಾಸಕ ಪ್ರೀತಂಗೌಡ ಅಕಸ್ಮಾತ್ ಶಾಸಕರಾಗಿದ್ದಾರೆ ಎಂದು ಎಚ್‍ಡಿಕೆ ಹೇಳಿಕೆ ನೀಡಿದ್ದರು, ಕುಮಾರಣ್ಣ ಏನೇ ಮಾತನಾಡಿದ್ರು ನನಗೆ ಆಶೀರ್ವಾದ. ಕುಮಾರಣ್ಣ ನನ್ನ ಹಿತೈಷಿ. ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ. ಆದರೆ ನಾನು ಯಾವ ಸ್ಪೀಡಲ್ಲೂ ಬಂದಿಲ್ಲ. ಮೂರುವರೆ ವರ್ಷ ಕಷ್ಟಪಟ್ಟು ಜನರ ಮಧ್ಯೆ ಇದ್ದು ಜನರ ಸೇವೆ ಮಾಡಿ, ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದುಕೊಂಡು ಶಾಸಕನಾಗಿದ್ದೇನೆ.

ಯಾವುದೇ ಕಾರಣಕ್ಕೂ ಆಕಸ್ಮಿಕವಾಗಿ ಶಾಸಕನೂ ಆಗಿಲ್ಲ, ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಆಕಸ್ಮಿಕವಾಗಿ ಏನೇನು ಆಗಿದ್ದಾರೆ ಎಂದು ಇತಿಹಾಸ ಪುಟ ತೆರೆದು ನೋಡಿದ್ರೆ ಗೊತ್ತಾಗುತ್ತೆ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾದ್ರು, ಸಚಿವರಾದ್ರು, ಯಾವ ಕುತಂತ್ರ ಬಳಸಿ ಸಿಎಂ ಆದ್ರು ಎಂಬುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಆಕಸ್ಮಿಕ ಎಂಬ ಪದ ಯಾರಿಗೆ ಸಮಂಜಸ ಎಂದು ಜನರು ತೀರ್ಮಾನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

Share This Article
Leave a Comment

Leave a Reply

Your email address will not be published. Required fields are marked *