ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸವೆಂದಿರೋ ನೀವ್ಯಾಕೆ ಅದನ್ನು ಮಾಡ್ತಿದ್ದೀರಿ?: ಪ್ರದೀಪ್ ಈಶ್ವರ್

Public TV
1 Min Read

ಬೆಂಗಳೂರು: ಸಂಸದರಾಗಿರುವ ಪ್ರತಾಪ್ ಸಿಂಹ ಅವರೇ, ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸ ಅಲ್ವಾ?. ಕೊಚ್ಚೆಗೆ ಕೈ ಹಾಕೋ ಕೆಲಸ ನೀವ್ಯಾಕೆ ಮಾಡ್ತಿದ್ದೀರಿ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಾಪ್ ಸಿಂಹ (Pratap Simha) ವಿರುದ್ಧ ಶಾಸಕರು ಕಿಡಿಕಾರಿದ್ದಾರೆ. ಪ್ರತಾಪ್ ಸಿಂಹ ಕೊಚ್ಚೆ ಅಂತ ಪದ ಬಳಕೆ ಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಎದೆ ಬಗೆದ್ರೆ ಶ್ರೀರಾಮ, ಸಿದ್ದರಾಮಯ್ಯ, ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ: ಪ್ರದೀಪ್ ಈಶ್ವರ್

ನಮ್ಮ ಸರ್ಕಾರದಲ್ಲಿ ಮಾಡಿದ ಕೆಲಸಕ್ಕೆ ಇವರು ಹೆಸರು ಪಡೆದುಕೊಳ್ತಾರೆ. ಪ್ರತಾಪ್ ಸಿಂಹಗೆ ನಾನು ಚಾಲೆಂಜ್ ಮಾಡ್ತೀನಿ. ಈ ಸಲ ಚುನಾವಣೆಯಲ್ಲಿ ನಿನ್ನನ್ನು ಸೋಲಿಸ್ತಾರೆ. ಆಗ ಪ್ರತಾಪ್ ಸಿಂಹ ಹೋಗಿ ಕಾವೇರಿ ನೀರಲ್ಲಿ ಪಾಪ ತೊಳೆದುಕೊಳ್ಳಲಿ ಎಂದರು.

ಸಿದ್ದರಾಮಯ್ಯ (Siddaramaiah) ನಮ್ಮ ಭವಿಷ್ಯ, ನಮ್ಮಂತ ಅಹಿಂದ ಹುಡುಗರಿಗೆ ನೋವಾದ್ರೆ ನಾವು ಸುಮ್ನೆ ಇರಲ್ಲ. ಪ್ರತಾಪ್ ಸಿಂಹ ಅವರೇ ಮೈಂಡ್ ಯುವರ್ ಟಂಗ್, ನಾವಂತೂ ಹೀಗೆ ಮಾತು ಮುಂದುವರಿದರೆ ಸುಮ್ನೆ ಇರಲ್ಲ ಎಂದು ಶಾಸಕರು ಎಚ್ಚರಿಕೆ ನೀಡಿದರು.

Share This Article