ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

Public TV
2 Min Read

ಚಿಕ್ಕಬಳ್ಳಾಪುರ: ಸದಾ ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುವ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಈಗ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಚಿಕ್ಕಬಳ್ಳಾಪುರದ (Chikkaballapura) ಸರ್ ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಟೋ ಚಾಲಕರಿಗೆ 5,000 ರೂ. ಸಹಾಯ ಧನ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದು ಶಾಸಕರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸುಧಾಕರ್ ನಮ್ಮೂರ ಹುಡ್ಗ, ಬೇರೆ ಕ್ಷೇತ್ರ ನೋಡಿಕೊಂಡ್ರೆ ಮುಂದಿನ ಸಲ ವಿಧಾನಸೌಧಕ್ಕೆ ಬರ್ತಾರೆ: ಪ್ರದೀಪ್ ಈಶ್ವರ್ ಟಾಂಗ್

ಇದಕ್ಕೂ ಮುನ್ನ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ಚಾಲಕರ ಕಷ್ಟ ನನಗೆ ಗೊತ್ತಿದೆ. ನಾನು ಕೂಡ ಕಷ್ಟ ಪಟ್ಟಿದ್ದೀನಿ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಮೂಟೆ ಹೊತ್ತಿದ್ದೀನಿ. 50 ರೂ. ಸಿಗುತ್ತೆ ಅಂತ ಹಿಂದೆ ಆಟೋ ಓಡಿಸಿದ್ದೀನಿ ಎಂದು ನೆನಪಿಸಿಕೊಂಡರು.

ಮಾಜಿ ಸಚಿವ ಸುಧಾಕರ್ ಬಗ್ಗೆ ಮಾತನಾಡಿ, ಅಣ್ಣನಿಗೆ 5 ವರ್ಷ ವಿರಾಮ ಇದೆ. ವಿದ್ಯಾಸಂಸ್ಥೆಗಳನ್ನ ಕಟ್ಟಿ. ನೀವು ದುಡ್ಡು ಮಾಡೋ ಅವಶ್ಯಕತೆ ಇಲ್ಲ. ನಿಮ್ಮ ಹತ್ತಿರ ಈಗಾಗಲೇ ದುಡ್ಡು ಹೆಚ್ಚಾಗಿದೆ. ಬೈಬೇಕಾದರೇ ನನ್ನ ಬೈಯಿರಿ. ನನಗೆ ನೀವು ಬೈಯ್ಯೋದು ಏನು ಹೊಸದಲ್ಲ. ನಾನು ಬೈಸಿಕೊಳ್ಳೋದು ಹೊಸದಲ್ಲ. ನೀವು 5 ವರ್ಷ ನನಗೆ ಬಹಳ ತೊಂದರೆ ಕೊಟ್ಟಿದ್ದೀರಿ. ಆಗಲೇ ನಾನು ನಿಮಗೆ ಸೊಪ್ಪು ಹಾಕಿದವನಲ್ಲ, ಈಗ ಸೊಪ್ಪು ಹಾಕ್ತೀನಾ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಇಬ್ಬರೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ.. ಯಾರಿಗೆ ಎಷ್ಟು ವೋಟು ಬರುತ್ತೆ ನೋಡೋಣ – ಪ್ರದೀಪ್ ಈಶ್ವರ್‌ಗೆ ಸುಧಾಕರ್ ಸವಾಲು

ಬೆದರಿಕೆ ಹಾಕಿದ್ರೆ ಸೈಲೆಂಟ್ ರಾಜಕಾರಣ ಮಾಡೋಕೆ ನಾನು ಸುಧಾಕರ್ ಅಲ್ಲ. ತೆಪ್ಪಗೆ ನಿಮ್ಮ ಬ್ಯುಸಿನೆಸ್ ನಿಮ್ಮ ಕೆಲಸ ಮಾಡ್ಕೊಳ್ಳಿ. ಆಗಲ್ಲ ಹೋಗಲ್ಲ ಅಂತ ಬಾಲ ಬಿಚ್ಚಿದ್ರೆ ಕಟ್ ಮಾಡ್ತೀನಿ. ಸುಧಾಕರ್ ಅಷ್ಟು ಸ್ಮೂತ್ ಅಲ್ಲ ಪ್ರದೀಪ್ ಈಶ್ವರ್ ಎಂದು ಎಚ್ಚರಿಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್