ಬೀದರ್: ಕೋರ್ಟ್‌ಗೆ ಹಾಜರಾಗಲು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ಕರ್ನಾಟಕ ಹೈಕೋರ್ಟ್‌ನ (Karnataka Highcourt) ಕಲಬುರಗಿ ಪೀಠ (Kalaburagi Bench) ಔರಾದ್ (Aurad) ಶಾಸಕ ಪ್ರಭು ಚೌಹಾಣ್‌ಗೆ (Prabhu Chauhan) 1 ಲಕ್ಷ ರೂ. ದಂಡ ವಿಧಿಸಿದೆ.
ಶಾಸಕ ಪ್ರಭು ಚೌಹಾಣ್ ವಿರುದ್ಧ ಜಾತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ಈ ಸಂಬಂಧ ಕೋರ್ಟ್‌ಗೆ ಹಾಜರಾಗಲು ಚೌಹಾಣ್ ಪರ ವಕೀಲರು ಪದೇ ಪದೇ ಸಮಯ ಕೇಳುತ್ತಿರುವ ಹಿನ್ನೆಲೆ ದಂಡ ವಿಧಿಸಲಾಗಿದೆ.ಇದನ್ನೂ ಓದಿ: ಜಪಾನ್‌ನ ಹೈ-ಸ್ಪೀಡ್ ಬುಲೆಟ್ ರೈಲಿನಲ್ಲಿ ಮೋದಿ ಸವಾರಿ
ಕಳೆದ ಬಾರಿಯೂ ಕೋರ್ಟ್‌ಗೆ ಹಾಜರಾಗದೆ ಚೌಹಾಣ್ ಪರ ವಕೀಲರು ಸಮಯ ಕೇಳಿದ್ದರು. ಈ ಬಾರಿಯೂ ಮತ್ತೆ ಸಮಯ ಕೇಳಿದ್ದಕ್ಕೆ 1 ಲಕ್ಷ ದಂಡ ರೂ. ವಿಧಿಸಿ, ಸೆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಬೀದರ್‌ನ (Bidar) ಕಮಲ ನಗರ ತಾಲೂಕಿನ ನಿವಾಸಿ ನರಸಿಂಗ್ ಎಂಬುವವರು ಶಾಸಕ ಪ್ರಭು ಚೌಹಾಣ್ ಪರಿಶಿಷ್ಟ ಜಾತಿಯವರಲ್ಲ, ಅವರು ಪರಿಶಿಷ್ಟ ಪಂಗಡದವರು ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ದಾವೆ ಹೂಡಿದ್ದರು.
ಚೌಹಾಣ್ ಅವರು ಮೂಲತಃ ಮಹಾರಾಷ್ಟ್ರದಲ್ಲಿ (Maharashtra) ಜನಿಸಿದ್ದು, ಕರ್ನಾಟಕ (Karnataka) ನಿವಾಸಿಯಲ್ಲ. ಅವರು ಮಹಾರಾಷ್ಟ್ರದಲ್ಲಿ ಲಂಬಾಣಿ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿದ್ದಾರೆ. ಹೀಗಾಗಿ ಶಾಸಕ ಚೌಹಾಣ್ ಅವರ ಎಸ್ಸಿ (SC) ಜಾತಿ ಪ್ರಮಾಣ ಪತ್ರ ರದ್ದುಗೊಳಿಸಬೇಕು ಎಂದು ಉಲ್ಲೇಖಿಸಿದ್ದರು.ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿನ ಶಿಫ್ಟ್ ಭವಿಷ್ಯ ಇಂದು ನಿರ್ಧಾರ