ಚುನಾವಣೆ ಗೆದ್ದ ಬಳಿಕ ಜನರ ಶೂ ಪಾಲಿಶ್ ಮಾಡಲು ಕುಳಿತ ಶಾಸಕ

Public TV
1 Min Read

ಜೈಪುರ: ಕೆಲ ದಿನಗಳ ಹಿಂದೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಸಾಮಾನ್ಯವಾಗಿ ಚುನಾವಣೆ ಗೆದ್ದ ಬಳಿಕ ಜನಪ್ರತಿನಿಧಿಗಳು ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಾರೆ. ಚುನಾವಣೆಯ ಬಳಿಕ ಜನರಿಂದ ದೂರು ಉಳಿದುಕೊಳ್ಳುತ್ತಾರೆ ಎಂಬ ಆರೋಪಗಳು ಸಹ ಕೇಳಿಬರುತ್ತವೆ. ಇವೆಲ್ಲದರ ನಡುವೆ ರಾಜಸ್ಥಾನದ ಶಾಸಕರು ಮಾರುಕಟ್ಟೆಯಲ್ಲಿ ಶೂ ಪಾಲಿಶ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಶಾಸಕ ಓಂ ಪ್ರಕಾಶ್ ಹುಡ್ಲಾ ಶೂ ಪಾಲಿಶ್ ಮಾಡಿದ್ದಾರೆ. ರಾಜಸ್ಥಾನದ ಮಹುವಾ(ದೌಸ) ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿಯ ರಾಜೇಂದ್ರ ಮೀಣಾ ಅವರನ್ನು 9,985 ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಮಹುವಾ ಮಾರುಕಟ್ಟೆಗೆ ಬಂದ ಶಾಸಕರು ಸಾರ್ವಜನಿಕರ ಶೂ ಪಾಲಿಶ್ ಮಾಡಲು ಕುಳಿತರು.

ಶೂ ಪಾಲಿಶ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇವರು. ಇಂದು ಪ್ರಜೆಗಳು ನನ್ನ ಮೇಲೆ ನಂಬಿಕೆ ಇರಿಸಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಶೂ ಪಾಲಿಶ್ ಮಾಡುವದರಿಂದ ನಾನು ಅವರಲ್ಲೊಬ್ಬ ಎಂಬ ಭಾವನೆ ಬರುತ್ತೆ. ನನ್ನ ಬಳಿ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಾನೋರ್ವ ಜನರ ಸೇವಕ ಸಂದೇಶ ಈ ಕೆಲಸದಲ್ಲಿ ಅಡಗಿದೆ ಎಂದು ಹೇಳಿದರು.

ಚುನಾವಣೆಗೆ ಮುನ್ನ ಓಂ ಪ್ರಕಾಶ್ ಬಿಜೆಪಿಯಿಂದ ಟಿಕೆಟ್ ಸಿಗುತ್ತೆ ಎಂದು ಹೇಳಲಾಗಿತ್ತು. ಕೊನೆ ಕ್ಷಣದಲ್ಲಿ ಬಿಜೆಪಿ ರಾಜೇಂದ್ರ ಮೀಣಾ ಅವರಿಗೆ ಟಿಕೆಟ್ ನೀಡಿತ್ತು. ಹೀಗಾಗಿ ಯಾವ ಪಕ್ಷವನ್ನು ಸೇರದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿ ಗೆಲುವು ಸಾಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *