ಸಿಎಂಗೆ ಸೆಡ್ಡು ಹೊಡೆದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ – ಶಿವಾಜಿ ಪ್ರತಿಮೆ ಮತ್ತೆ ಲೋಕಾರ್ಪಣೆ

By
1 Min Read

ಬೆಳಗಾವಿ: ಜಿಲ್ಲೆಯ ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಿರುವ ಶಿವಾಜಿ ಪ್ರತಿಮೆಯನ್ನು (Shivaji Statue) ಮತ್ತೆ ಲೋಕಾರ್ಪಣೆಗೊಳಿಸಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೇ ಸೆಡ್ಡು ಹೊಡೆದಿದ್ದಾರೆ.

ಈಚೆಗಷ್ಟೇ ಬೆಳಗಾವಿ (Belagavi) ಜಿಲ್ಲೆಯ ರಾಜಹಂಸಗಡ ಕೋಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಆದರೆ ಭಾನುವಾರ ಮತ್ತೆ ಅದೇ ಪ್ರತಿಮೆಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ನನ್ನ ಮೇಲೆ ಬಿಜೆಪಿ ಸರ್ಕಾರ ಎರಡು ಕೇಸ್ ಹಾಕಿದೆ: ಲಕ್ಷ್ಮಿ ಹೆಬ್ಬಾಳ್ಕರ್

ರಾಜಹಂಸಗಡ ಕೋಟೆಯಲ್ಲಿ ಅದ್ಧೂರಿ ಲೋಕಾರ್ಪಣೆ ಸಮಾರಂಭ ಏರ್ಪಡಿಸಿದ್ದ ಲಕ್ಷ್ಮಿ ಹೆಬ್ಬಾಳಕರ್, ರಾಜಹಂಸಗಡ ಕೋಟೆಗೆ ಆಗಮಿಸಿದ ಪಲ್ಲಕ್ಕಿಗೆ ಅದ್ಧೂರಿ ಸ್ವಾಗತ ಕೋರಿದರು.‌ ಸಮಾರಂಭಕ್ಕೆ ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇ ಅವರ ಜೊತೆಯಲ್ಲಿ ಲಾತೂರು ಶಾಸಕ ಧೀರಜ್ ದೇಶಮುಖ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಕೊಲ್ಲಾಪೂರ ಶಾಸಕ ಕೂಡಾ ಆಗಮಿಸಿದ್ದರು.‌

ಕೇಸರಿ ಸೀರೆ, ಕೇಸರಿ ಪೇಟ ತೊಟ್ಟು ರಾಜಹಂಸಗಡ ಕೋಟೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಎಂಟ್ರಿ ಕೊಟ್ಟರು. ಈ ವೇಳೆ ರಾಜಮಹಾರಾಜರ ಆಸ್ಥಾನದಲ್ಲಿ ನಡೆಯುತಿದ್ದ ದರ್ಬಾರ್ ರೀತಿಯಲ್ಲಿ ಶಿವಾಜಿ ಪುತ್ಥಳಿ ಅನಾವರಣ ಮಾಡಲಾಯಿತು. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಈ ಸರ್ಕಾರಗಳನ್ನ ಕಿತ್ತೊಗೆಯಬೇಕು – ಖರ್ಗೆ ಕರೆ

Share This Article
Leave a Comment

Leave a Reply

Your email address will not be published. Required fields are marked *