ಅರಣ್ಯಾಧಿಕಾರಿಗಳ ಎದುರೇ ಮನೆ ನಿರ್ಮಾಣಕ್ಕೆ ಸೂಚನೆ ಕೊಟ್ಟ ಶಾಸಕ

Public TV
1 Min Read

ಮಂಗಳೂರು: ಬೆಳ್ತಂಗಡಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿರೋ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಂಪೂರ್ಣ ಮನೆಯನ್ನು ಕಿತ್ತೊಗೆದ ಘಟನೆ ನಡೆದಿದೆ.

ಬೆಳ್ತಂಗಡಿಯ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿನ ಅರಣ್ಯ ತಪ್ಪಲಿನಲ್ಲಿ ಕಳೆದ ಹಲವಾರು ವರ್ಷದಿಂದ ಸುಮಾರು 200 ಕ್ಕೂ ಅಧಿಕ ಮನೆಗಳಿದ್ದು ಲೋಲಾಕ್ಷ ಎಂಬವರು ತನ್ನ ಗುಡಿಸಲಿನಂತಿದ್ದ ಮನೆಯನ್ನು ತೆಗೆದು ಹೊಸ ಮನೆ ನಿರ್ಮಿಸುತ್ತಿದ್ದರು.

ಅರಣ್ಯ ಇಲಾಖೆಯ ಕಾನೂನಿನಂತೆ ಹೊಸ ಮನೆ ನಿರ್ಮಾಣ ಅವಕಾಶವಿಲ್ಲದಿದ್ದು, ಏಕಾಏಕಿ ಮನೆಯನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದರು. ಹೀಗಾಗಿ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಅವರ ಸಮ್ಮುಖದಲ್ಲೇ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಇದನ್ನೂ ಓದಿ: ಎಮರ್ಜೆನ್ಸಿ ಅಲರ್ಟ್- ಲಕ್ಷಾಂತರ ಫೋನ್‌ಗಳಿಗೆ ಸರ್ಕಾರದಿಂದ ಬಂತು ಮೆಸೇಜ್

ಶಾಸಕ ಪೂಂಜಾ ಸೂಚನೆಯಂತೆ ಮನೆ ಕಾಮಗಾರಿ ಆರಂಭಿಸಿದ 11 ಮಂದಿ ಸ್ಥಳೀಯರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯಾಧಿಕಾರಿ ಜಯಪ್ರಕಾಶ್ ನೀಡಿದ ದೂರಿನಂತೆ ಅರಣ್ಯ ಒತ್ತುವರಿ,ಅಕ್ರಮ ಪ್ರವೇಶ ಹಾಗೂ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ದೂರು ದಾಖಲಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್