ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದ ಎ5 ಆರೋಪಿಯಾಗಿರುವ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್‌ಗೆ (Byrathi Basavaraj) ಪೊಲೀಸರ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ತಾಕೀತು ಮಾಡಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.
ಬಿಎನ್‌ಎಸ್‌ಎಸ್ 35 (3)ಯ ನಿಯಮಗಳನ್ನು ಪಾಲಿಸುವಂತೆ ಹೈಕೋರ್ಟ್ ತನಿಖಾಧಿಕಾರಿಗೆ ಸೂಚನೆ ನೀಡಿದೆ. ಅಲ್ಲದೇ, ಕೊಲೆಯಲ್ಲಿ ಆರೋಪಿ ಪಾತ್ರವಿರುವ ಬಗ್ಗೆ ದೂರುದಾರೆ ಹೇಳಿರುವುದರಿಂದ ಅರೆಸ್ಟ್ ಮಾಡದಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಸಹ ಹೈಕೋರ್ಟ್ ಹೇಳಿದೆ. ಹೀಗಾಗಿ, ಇವತ್ತಿನ ಹೈಕೋರ್ಟ್ ಆದೇಶ ಬೈರತಿ ಬಸವರಾಜ್‌ಗೆ ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ಹೇಬಿಯಸ್ ಕಾರ್ಪಸ್ ಅರ್ಜಿ ವಜಾ
7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಶಿಕ್ಷೆಗಳ ಸೆಕ್ಷನ್‌ಗಳಿದ್ದಾಗ ಈ ಹಿಂದೆ ಸಿಆರ್‌ಪಿಸಿ 41a ಅಡಿ ನೋಟಿಸ್ ಕೊಡಬಹುದಿತ್ತು. ಈಗ ಬಿಎನ್‌ಎಸ್‌ಎಸ್ 35 (3) ಅಡಿ ನೋಟಿಸ್ ನೀಡಿ ಕಳಿಸಬಹುದು. ಅದೂ ತನಿಖಾಧಿಕಾರಿಗೆ ಸದ್ಯಕ್ಕೆ ರೋಲ್ ಕಂಡುಬಂದಿಲ್ಲ ಅನ್ನಿಸಿದಾಗ ಮಾತ್ರ. ಹೈಕೋರ್ಟ್‌ನಿಂದ ಆದೇಶ ಹೊರಬೀಳ್ತಿದ್ದಂತೆ ಪುಲಕೇಶಿನಗರ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ದೇವರಾಜ್, ಎಸಿಪಿ ಗೀತಾ ಠಾಣೆಗೆ ದೌಡಾಯಿಸಿದರು. ತನಿಖಾ ತಂಡದ ಜೊತೆ ಅಧಿಕಾರಿಗಳ ದಿಢೀರ್ ಸಭೆ ಕೂಡ ನಡೆಸುತ್ತಿದ್ದು, ನಾಳೆ ಶಾಸಕ ಬೈರತಿ ಬಸವರಾಜ್ ವಿಚಾರಣೆ ಸಂಬಂಧ ಸಿದ್ಧತೆ ಕೈಗೊಳ್ಳಲಾಗಿದೆ.
ವಿಚಾರಣೆಯ ಆಯಾಮಗಳು, ಏನೆಲ್ಲಾ ಪ್ರಶ್ನೆಗಳನ್ನ ಮಾಡಬೇಕು? ತನಿಖೆ ವೇಳೆ ಬೈರತಿ ಬಸವರಾಜ್ ವಿರುದ್ಧ ಏನೆಲ್ಲಾ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ ಅಂತಾ ಪರಿಶೀಲನೆ ನಡೆಸಲಾಗಿದೆ. ಹೈಕೋರ್ಟ್ ಸೂಚನೆ ಅನ್ವಯ ವಿಚಾರಣೆ ನಡೆಸಲು ಪೊಲೀಸರು ತಯಾರಿ ಮಾಡಿಕೊಂಡಿದ್ದು, ಅರೆಸ್ಟ್ ಆಗ್ತಾರಾ ಅಥವಾ ಬಿಎನ್‌ಎಸ್‌ಎಸ್ 35 ಅಡಿ ನೋಟಿಸ್ ಕೊಟ್ಟು ಕಳಿಸ್ತಾರಾ ಎನ್ನುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪೊಲೀಸರು ಈವರೆಗಿನ ತನಿಖೆಯಲ್ಲಿ ಬೈರತಿ ಬಸವರಾಜ್ ರೋಲ್ ಸಣ್ಣ ಪ್ರಮಾಣದಲ್ಲಿ ಕಂಡುಬಂದರೂ ಬಂಧನ ಸಾಧ್ಯತೆ ಹೆಚ್ಚಿದೆ. ಶಾಸಕರ ವಿಚಾರಣೆ ಬಳಿಕ ಬಂಧನವಾ ಇಲ್ಲಾ ನೋಡಿಸ್ ಕೊಟ್ಟು ಕಳಿಸ್ತಾರಾ ಎಂಬುದು ಸದ್ಯದ ಕುತೂಹಲ. ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸಲ್ಲಿ ಬಿಗ್ ಟ್ವಿಸ್ಟ್ – ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ: ಬಿಕ್ಲು ಶಿವ ತಾಯಿ