ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿ ಸಾಗರ ಕ್ಷೇತ್ರದಲ್ಲಿ ಕಣಕ್ಕಿಳಿಯಬೇಕು ಅಂತಾ ಆಸೆ ಪಟ್ಟಿದ್ದೆ. ಆದ್ರೆ ನನಗೆ ಟಿಕೆಟ್ ತಪ್ಪಿಸಿ, ಬಿಜೆಪಿ ಅತ್ಯಾಚಾರಿಗಳಿಗೆ ಮಣೆ ಹಾಕುವ ಮೂಲಕ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ ಅಂತಾ ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರವಿದ್ದಾಗ ಕುಮಾರಸ್ವಾಮಿ ಅಧಿಕಾರ ಕೊಡಲಿಲ್ಲ ಅಂತಾ ಅತ್ತೂ ಕರೆದು ರಾಜ್ಯದ ಜನರ ಮುಂದೆ ಹೋದ್ರಿ. ಆದ್ರೆ ಇವತ್ತು ನೀವೆಲ್ಲಾ ಬೇಳೂರು ಗೋಪಾಲಕೃಷ್ಣಗೆ ಮಾಡಿದ್ದೇನು? ಎರಡು ಬಾರಿ ಸಾಗರ ಕ್ಷೇತ್ರದ ಶಾಸಕನಾಗಿ ಆಯ್ಕೆಗೊಂಡಿದ್ದರೂ, ನನಗೇಕೆ ಟಿಕೆಟ್ ನೀಡಲಿಲ್ಲ ಅಂತಾ ಬಿಜೆಪಿಗೆ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ
ಅವನ ಸಿಡಿ ಎಲ್ಲೋ ಇವರ ಬಳಿ ಇರಬೇಕು ಹಾಗಾಗಿ ಟಿಕೆಟ್ ನೀಡಿದ್ದಾರೆ. ಸಾಗರದ ಹೆಣ್ಣು ಮಕ್ಕಳು ಅತ್ಯಾಚಾರಿಗೆ ಟಿಕೆಟ್ ಕೊಟ್ಟಿದ್ರಿಂದ ಛೀ.. ಥೂ.. ಅಂತಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪ ಹಾಗು ಅವರ ಮಗ ರಾಘವೇಂದ್ರ ಕಾರಣ. ನನ್ನ ರಾಜಕೀಯ ಗುರು ಬಂಗಾರಪ್ಪನವರನ್ನ ಎದುರು ಹಾಕಿಕೊಂಡು ಬಿವೈ ರಾಘವೇಂದ್ರನಿಗೆ ಪ್ರಚಾರ ನಡೆಸಿದ್ದರಿಂದ ಅಂದು ಅವರು ಗೆಲುವನ್ನು ಕಂಡಿದ್ದಾರೆ. ರಾಜ್ಯದಲ್ಲಿ ಯಾರ ಮೇಲಾದರು ಐಟಿ ರೇಡ್ ಮಾಡುವುದಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ಮಾಡಲಿ. ಎಲ್ಲರ ದುಡ್ಡನ್ನ ಬಾಚಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರೋದಿಲ್ಲ ಅಂತಾ ಗೊತ್ತಾಗಿ ಎಲ್ಲ ಕಡೆಯಿಂದಲೂ ಸಾಧ್ಯವಾದಷ್ಟು ದುಡ್ಡು ಬಾಚಿಕೊಳ್ಳುತ್ತಿದ್ದಾರೆ ಅಂತಾ ಆಕ್ರೋಶವನ್ನು ಹೊರ ಹಾಕಿದ್ರು.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಂಡಾಯ ಶಾಸಕನಾಗಿ ಸಾಗರ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದೇನೆ. ಶಿವಮೊಗ್ಗ ರಾಜಕಾರಣದಲ್ಲಿ ಯಡಿಯೂರಪ್ಪನೋ ಅಥವಾ ಬೇಳೂರು ಗೋಪಾಲಕೃಷ್ಣನೋ ನೋಡೆ ಬಿಡೋಣ. ಸಾಗರದ ಜನ ಬೇಳೂರು ಗೋಪಾಲಕೃಷ್ಣ ಜೊತೆಗಿದ್ದಾರೆ. ಸಾಗರದ ಎಲ್ಲಾ ನನ್ನ ಜನತೆಯ ಜೊತೆ ಮಾತಾಡಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಅಂತಾ ಸವಾಲೆಸದರು.
ಈ ಬಾರಿ ಚುನಾವಣೆಗೆ ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.