-ಬಿಹಾರ ಚುನಾವಣೆಗೆ ಫಂಡಿಂಗ್‌ಗಾಗಿ ಸಿಎಂ ಡಿನ್ನರ್ ಕರೆದಿದ್ದಾರೆ
ಬೆಂಗಳೂರು: RSS ಬಗ್ಗೆ ಖರ್ಗೆಗೆ ಏನೂ ಕಿಸಿಯೋಕೆ ಆಗ್ಲಿಲ್ಲ, ಇನ್ನೂ ಪ್ರಿಯಾಂಕ್‌ಗೆ ಆಗುತ್ತಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಉರಿಯುತ್ತಿರುವ ಬೆಂಕಿಯ ಮನೆಯಾಗಿದೆ. ಅಲ್ಲಿ ದಲಿತರಿಗೆ ಸ್ಥಾನ ಇಲ್ಲ ಅಂದ್ರೆ ಅಂಬೇಡ್ಕರ್ ಅನುಯಾಯಿಗಳು ಕಾಂಗ್ರೆಸ್‌ನಲ್ಲಿ ಇರಬಾರದು. ಅಂಬೇಡ್ಕರ್ ವಿರುದ್ಧ ಇರುವ ಖರ್ಗೆ ದಲಿತ ನಾಯಕರಲ್ಲ. ಖರ್ಗೆ ಕುಟುಂಬ ಅಂಬೇಡ್ಕರ್ ವಿಚಾರಗಳಿಂದ ದೂರವಿದ್ದು, ತಾಲಿಬಾನಿಯರನ್ನು ಬೆಂಬಲಿಸುತ್ತಾರೆ. ಗಾಂಧಿ ಕುಟುಂಬದ ಚೇಲಾ ಪ್ರಿಯಾಂಕ್ ಖರ್ಗೆ. ಅವರ ತಂದೆ, ಇಂದಿರಾ ಗಾಂಧಿ, ನೆಹರೂ ಅವರಿಗೂ ಸಂಘದ ಬಗ್ಗೆ ಏನೂ ಕಿಸಿಯಲು ಆಗಿಲ್ಲ. ಇನ್ನೂ ಪ್ರಿಯಾಂಕ್ ಖರ್ಗೆಗೆ ಏನು ಕಿಸಿಯಲು ಆಗುತ್ತೆ? ಬಿಜೆಪಿ ಬಗ್ಗೆ, ಆರ್‌ಎಸ್‌ಎಸ್ ಬಗ್ಗೆ ಮಾತಾಡುವಷ್ಟು ಪ್ರಿಯಾಂಕ್ ಖರ್ಗೆ ಪರಿಪಕ್ವ ಆಗಿಲ್ಲ. ಯಾವ ಶಾಖೆ ಬಂದ್ ಮಾಡ್ತಾರೋ ನೋಡೋಣ. ಮುಂದೆ ನಮ್ಮ ಸರ್ಕಾರ ಬಂದಾಗ ಬಡ್ಡಿ ಸಮೇತ ನೋಡಿಕೊಳ್ತೇವೆ. ಅಕ್ರಮ ಮಸೀದಿಗಳನ್ನು ಮೊದಲು ತೆಗೆದು ಹಾಕಿ ನಂತರ ಆರ್‌ಎಸ್‌ಎಸ್ ಬಗ್ಗೆ ಮಾತಾಡಲಿ. ಇನ್ನೆರಡು ವರ್ಷ ಹಾರಾಡಿಕೊಳ್ಳಲಿ, ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಸಿಎಂ ಡಿನ್ನರ್ ಪಾರ್ಟಿಗೂ ಅಧಿಕಾರ ಹಸ್ತಾಂತರಕ್ಕೂ ಸಂಬಂಧ ಇಲ್ಲ – ಪರಮೇಶ್ವರ್
ಇನ್ನೂ ಬಿಹಾರ ಚುನಾವಣೆಗೆ ಫಂಡಿಂಗ್ ಬೇಕಾಗಿದೆ. ಅದಕ್ಕೆ ಫಂಡ್ ಸಂಗ್ರಹಿಸಲು ಸಿಎಂ ಡಿನ್ನರ್ ಕರೆದಿದ್ದಾರೆ. ಇತ್ತ ಡಿಕೆಶಿ ಬೆಂಗಳೂರಿನಲ್ಲಿ ಚದರಡಿಗೆ 75 ರೂ. ಕಲೆಕ್ಟ್ ಮಾಡ್ತಿದ್ದಾರೆ, ಅದರಲ್ಲಿ 50 ರೂ. ಬಿಹಾರ ಚುನಾವಣೆಗೆ ಕೊಡಿ ಅಂತ ಕೇಳಿದ್ದಾರೆ. ಹೈಕಮಾಂಡ್‌ಗೆ ಸಿದ್ದರಾಮಯ್ಯ ಜಾಸ್ತಿ ಫಂಡ್ ಕೊಡ್ತಾರೋ ಅಥವಾ ಡಿಕೆಶಿ ಜಾಸ್ತಿ ಫಂಡ್ ಕೊಡ್ತಾರೋ ಅಂತ ಪೈಪೋಟಿ ಇದೆ. ಯಾರು ಹೆಚ್ಚು ಫಂಡ್ ಕೊಡ್ತಾರೆ ಅನ್ನೋದರ ಮೇಲೆ ನವೆಂಬರ್ ಕ್ರಾಂತಿ ನಡೆಯುತ್ತದೆ. ಯಾರು ಎಷ್ಟು ಫಂಡ್ ಕೊಡ್ತಾರೆ ಅದರ ಮೇಲೆ ಸಿಎಂ ಸ್ಥಾನ ನಿಂತಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಇದೇ ವೇಳೆ ಹೆಚ್‌ಡಿಡಿ ಆರೋಗ್ಯದ ಬಗ್ಗೆ ಮಾತನಾಡಿ, ದೇವೇಗೌಡರು ಆರೋಗ್ಯವಾಗಿದ್ದಾರೆ, ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅವರ ಸ್ಮರಣ ಶಕ್ತಿ, ಕ್ರಿಯಾಶೀಲತೆ ದೇಶಕ್ಕೆ ಮಾದರಿ. ಅತ್ಯಂತ ಆತ್ಮೀಯತೆಯಿಂದ ಅವರು ನಮ್ಮನ್ನು ಮಾತಾಡಿಸಿದರು. ಅವರು ದೇಶಕ್ಕೆ ಆಸ್ತಿ, ಅವರು ಶತಾಯುಷಿ ಆಗಲಿ. ಅವರ ಹಿರಿತನ ದೊಡ್ಡದು, ಅವರ ದರ್ಶನ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಬಗ್ಗೆ ನಾನು ಸಾಫ್ಟ್ ಆಗಿಲ್ಲ. ಅದು ನಿಮ್ಮ ಡಿಕ್ಷನರಿಯಲ್ಲಿ ಇದ್ರೆ ತೆಗೆದುಬಿಡಿ. ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳದಿದ್ರೂ ಪರವಾಗಿಲ್ಲ. ನಾನು ಅವರ ಮೇಲೆ ಸಾಫ್ಟ್ ಆಗಲ್ಲ, ಅವರ ಜೊತೆ ನಾನು ರಾಜೀನೂ ಆಗಲ್ಲ. ಯಡಿಯೂರಪ್ಪ ಬಳಿ ಹೋಗಿ ಕ್ಷಮೆ ಕೇಳಿ ಅಂತ ಹೈಕಮಾಂಡ್ ಹೇಳಿದರೆ ನಾನು ಕ್ಷಮೆ ಕೇಳಲ್ಲ. ಬಿಜೆಪಿಗೆ ಹಿಂದುತ್ವ ಬೇಕಾಗಿದ್ರೆ, ಭವಿಷ್ಯ ಬೇಕಾಗಿದ್ರೆ ಯಡಿಯೂರಪ್ಪ ಹಿಡಿತದಿಂದ ಬಿಜೆಪಿ ಮುಕ್ತವಾಗಬೇಕು ಎಂದು ಹೇಳಿದ್ದಾರೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ