ಕರ್ನಾಟಕದ ಹಿಂದೂಗಳು ಒಂದಾಗಬೇಕು: ಯತ್ನಾಳ್

Public TV
1 Min Read

ವಿಜಯಪುರ: ಸಮಸ್ತ ಹಿಂದೂಗಳು ಒಂದಾಗಬೇಕು. ವಿಜಯಪುರದಲ್ಲಿ ಹಿಂದೂಗಳು (Hindu) ಒಗ್ಗಟ್ಟಾಗಿ ಇದ್ದಾರೆ. ಅದೇ ತರಹ ಸಮಸ್ತ ಕರ್ನಾಟಕದ ಹಿಂದೂಗಳು ಒಂದಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ.

ವಿಜಯಪುರ (Vijayapura) ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡಿದ್ರೆ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಓವೈಸಿ ಭಾಷಣ ಮಾಡ್ತಾರೆ. 15 ನಿಮಿಷ ಟೈಮ್ ನೀಡಿದ್ರೆ ಹಿಂದೂಗಳನ್ನು ಖತಮ್ ಮಾಡ್ತೀನಿ ಎಂದು ತಿಳಿಸಿದ್ದಾರೆ. ಅದಕ್ಕಾಗಿ ಹಿಂದೂಗಳು ಒಂದಾಗಬೇಕು ಎಂದು ಹೇಳುವ ಮೂಲಕ ಎಐಎಂಐಎಂ ಅಧ್ಯಕ್ಷ ಓವೈಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳು ಬೋಗಸ್ ಸ್ಕೀಮ್‍ಗಳು. 200 ಯುನಿಟ್ ವಿದ್ಯುತ್ (Electricity) ಕೊಡ್ತೀನಿ ಎಂದು ರೂಲ್ಸ್ ಮಾಡಿದ್ದಾರೆ. ಇದರಿಂದ ಜನತೆಗೆ ಸಮಸ್ಯೆ ಆಗಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ನೇರವಾಗಿ 5 ಕೆ.ಜಿ ಅಕ್ಕಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಗ್ಯಾರಂಟಿ (Congress Guarantee) ವಿರುದ್ಧ ಯತ್ನಾಳ್ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ವೀರಯೋಧ ಕ್ಯಾ.ಪ್ರಾಂಜಲ್‌ ಅಂತಿಮ ಯಾತ್ರೆ – ತ್ರಿವರ್ಣ ಧ್ವಜ ಹಿಡಿದು ಜನರಿಂದ ಸೆಲ್ಯೂಟ್‌

Share This Article