ಜೆರುಸಲೆಮ್: ಡೊನಾಲ್ಡ್ ಟ್ರಂಪ್ (Donald Trump) ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕೆ ಇಸ್ರೇಲ್ ಸಂಸದರನ್ನು ಸಂಸತ್ ಭವನದಿಂದಲೇ ಬಲವಂತವಾಗಿ ಹೊರಹಾಕಿದ ಪ್ರಸಂಗ ಇಂದು ನಡೆಯಿತು.
ಇಸ್ರೇಲ್ ಮತ್ತು ಗಾಜಾದ ಹಮಾಸ್ ಬಂಡುಕೋರರ ನಡುವಿನ ಸುದೀರ್ಘ 2 ವರ್ಷಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಟ್ರಂಪ್ ಭಾಷಣ ಮಾಡಿದರು.
Hadash-Ta’al MKs Ayman Odeh and Ofer Cassif removed from Trump’s speech after holding up signs calling to “recognize Palestine.”
Trump quips that the ejection was “very efficient.” pic.twitter.com/0tvs7JbSAS
— Sam Sokol (@SamuelSokol) October 13, 2025
ಹಲವು ವರ್ಷಗಳ ನಿರಂತರ ಯುದ್ಧದ ನಂತರ ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ಯುದ್ಧದ ಅಂತ್ಯ ಮಾತ್ರವಲ್ಲ, ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯ: ಟ್ರಂಪ್
ಭಾಷಣ ಮಾಡುತ್ತಿದ್ದಾಗ ಟ್ರಂಪ್ ವಿರುದ್ಧ ಹೀಬ್ರೂ ಭಾಷೆಯಲ್ಲಿ ಸಂಸದರಾದ ಐಮನ್ ಒಡೆಹ್ ಮತ್ತು ಓಫರ್ ಕ್ಯಾಸಿಫ್ ಘೋಷಣೆ ಕೂಗಿದರು. ಇವರಿಬ್ಬರು ಪ್ಯಾಲೆಸ್ಟೈನ್ ರಾಷ್ಟ್ರದ ಮಾನ್ಯತೆಗಾಗಿ ಕರೆ ನೀಡುವ ಫಲಕಗಳನ್ನು ಹಿಡಿದಿದ್ದರು. ಘೊಷಣೆ ಕೂಗಿದ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಬಲವಂತವಾಗಿ ಎಡಪಂಥಿಯ ಸಂಸದರನ್ನು ಹೊರಗೆ ಎಳೆದುಕೊಂಡು ಹೋದರು.