ನನ್ನ ಮೇಲೆ ಬಿಜೆಪಿ ಮುಖಂಡ ಎಂ.ಜೆ.ಅಕ್ಬರ್ ಅತ್ಯಾಚಾರ ಎಸಗಿದ್ರು: ಪತ್ರಕರ್ತೆಯಿಂದ ಬಾಂಬ್

Public TV
2 Min Read

ನವದೆಹಲಿ: ನನ್ನ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಅತ್ಯಾಚಾರ ಎಸಗಿದ್ದರು ಎಂದು ಭಾರತೀಯ ಮೂಲದ ಅಮೇರಿಕಪತ್ರಕರ್ತೆ ಪಲ್ಲವಿ ಗಗೋಯ್ ಆರೋಪಿಸಿದ್ದಾರೆ.

ಪಲ್ಲವಿ ಗಗೋಯಲ್ ಈ ಕುರಿತು ವಾಷಿಂಗ್ಟನ್ ಪೋಸ್ಟ್ ನಲ್ಲಿ ಗುರುವಾರ, ತಮ್ಮ ಮೇಲಾದ ಅತ್ಯಾಚಾರ ಕುರಿತಾಗಿ ಬರೆದುಕೊಂಡಿದ್ದಾರೆ. ನಾನು ಏಷ್ಯನ್ ಏಜ್ ಪತ್ರಿಕೆಯ ಒಪ್-ಎಡ್ ಪುಟದ ಸಂಪಾದಕಿಯಾಗಿದ್ದಾಗ ಅವರು ಅತ್ಯಾಚಾರ ಎಸಗಿದ್ದಾರೆ ಎಂದು ಪಲ್ಲವಿ ಅವರು ಆರೋಪಿಸಿದ್ದಾರೆ. ಈ ಮೂಲಕ 23 ವರ್ಷಗಳ ಹಿಂದೆ ಆಗಿರುವ ಘಟನೆಯನ್ನು ಹೊರಹಾಕಿದ್ದಾರೆ.

ಪಲ್ಲವಿ ಆರೋಪ ಏನು?
ಎಂ.ಜೆ.ಅಕ್ಬರ್ ಮೇಲೆ ಪತ್ರಕರ್ತೆಯರು ಆರೋಪ ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕಿತ್ತು. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅಕ್ಬರ್ ಅವರಂತಹ ವ್ಯಕ್ತಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಅಷ್ಟೇ ಅಲ್ಲದೆ ಆಡಳಿತ ಪಕ್ಷದ ಸದಸ್ಯರಾಗಿರುವುದು ದುರ್ದೈವ.

ನನ್ನ 22 ವಯಸ್ಸಿನಲ್ಲಿ ಏಷ್ಯನ್ ಏಜ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪತ್ರಿಕೆಯ ಸಂಪಾದಕರಾಗಿದ್ದ ಎಂ.ಜೆ.ಅಕ್ಬರ್ ಅವರ ಕೈಕೆಳಗೆ ಕೆಲಸ ಮಾಡುವುದು ಪ್ರತಿಷ್ಠೆಯ ವಿಚಾರವಾಗಿತ್ತು. ಆಗಿನ್ನು ಎಂ.ಜಿ.ಅಕ್ಬರ್ ಅವರಿಗೆ 40 ವರ್ಷ. ನಮ್ಮ ತಪ್ಪುಗಳನ್ನು ತಿದ್ದುತ್ತಲೇ ಗದರಿಸುತ್ತಿದ್ದರು ಹಾಗೂ ಬೈಯುತ್ತಿದ್ದರು. ಅವರ ನಿರೀಕ್ಷೆಯ ಮಟ್ಟದಲ್ಲಿ ನಾವು ಕೆಲಸ ಮಾಡುತ್ತಿಲ್ಲವೆಂದು ಹೀಯಾಳಿಸುತ್ತಿದ್ದರು.

ಅವರಿಂದ ನಾನು ಹೆಚ್ಚು ವಿಷಯಗಳನ್ನು ಕಲಿತುಕೊಂಡೆ. ಆತ್ಮೀಯವಾಗಿ ಬೆರೆತುಕೊಂಡೆ. ಹೀಗಾಗಿ ನನ್ನ 23ನೇ ವಯಸ್ಸಿಗೆ ಒಪ್-ಎಡ್ ಪುಟದ ಸಂಪಾದಕಿಯಾದೆ. ಹಿರಿಯ ಪತ್ರಕರ್ತರಾದ ಖುಷವಂತ್ ಸಿಂಗ್, ಜಸ್ವತ್ ಸಿಂಗ್ ರೀತಿಯಲ್ಲಿ ನನಗೂ ಅಂಕಣ ಬರೆಯಲು ಅವಕಾಶ ಸಿಕ್ಕಿತ್ತು.

ನನಗೆ ಸಿಕ್ಕ ಅವಕಾಶಗಳಿಗೆ, ಸ್ಥಾನಕ್ಕೆ ನಾನು ಭಾರೀ ಬೆಲೆ ತೆರಬೇಕಾಯಿತು. 1994ರಲ್ಲಿ ಒಂದು ದಿನ ಸಿದ್ಧಪಡಿಸಿದ್ದ ಪುಟವನ್ನು ತೋರಿಸಲು ಎಂ.ಜಿ.ಅಕ್ಬರ್ ಅವರ ಕೊಠಡಿಗೆ ಹೋಗಿದ್ದೆ. ಪುಟ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಕ್ಷಣವೇ ನನ್ನನ್ನು ಅಪ್ಪಿಕೊಂಡು ಬಲವಂತವಾಗಿ ಮುತ್ತಿಕ್ಕಿದರು. ಈ ಘಟನೆಯಿಂದ ಗಾಬರಿಗೊಂಡ ನಾನು ಗೊಂದಲಕ್ಕೆ ಒಳಗಾಗಿ ಅಲ್ಲಿಂದ ಹೊರ ಬಂದೆ.

ಈ ಘಟನೆಯಾದ ಕೆಲವು ತಿಂಗಳ ನಂತರದಲ್ಲಿ ನಿಯತಕಾಲಿಕವೊಂದರ ಉದ್ಘಾಟನೆ ಕಾರ್ಯಕ್ರಮವಿತ್ತು. ಹೀಗಾಗಿ ಫ್ಯಾನ್ಸಿ ತಾಜ್ ಹೊಟೇಲ್‍ನಲ್ಲಿ ರೂಮ್ ಪಡೆದಿದ್ದರು. ಆಗ ಪುಟವನ್ನು ಹೇಗೆ ವಿನ್ಯಾಸ ಮಾಡಿರುವಿರಿ, ನೋಡಬೇಕು ತೆಗೆದುಕೊಂಡು ಬನ್ನಿ ಎಂದು ಅಕ್ಬರ್ ಅವರು ತಿಳಿಸಿದ್ದರು.

ಸೂಚನೆಯೆಂತೆ ಅವರ ರೂಮ್‍ಗೆ ಹೋಗಿದ್ದೆ. ಆಗ ಈ ಹಿಂದೆ ನಡೆದುಕೊಂಡಂತೆ ವರ್ತಿಸಲು ಪ್ರಾರಂಭಿಸಿದರು. ಬಲವಂತವಾಗಿ ಕಿಸ್ ಮಾಡಲು ಅಕ್ಬರ್ ಬಂದಿದ್ದರು. ತಕ್ಷಣವೇ ಅವರನ್ನು ತಳ್ಳಿದೆ. ಆದರೆ ಇಷ್ಟಕ್ಕೆ ಬಗ್ಗದ ಅವರು ನನ್ನ ಮೇಲೆ ಬಲ ಪ್ರದರ್ಶನ ಮಾಡಿ, ಹಲ್ಲೆಗೆ ಯತ್ನಿಸಿದರು. ಅವರ ಜೊತೆಗೆ ಹೋರಾಡಿ ಅಲ್ಲಿಂದ ಅಳುತ್ತಲೇ ಹೊರಬಂದೆ.

ಈ ಎರಡು ಘಟನೆಯ ಬಳಿಕ, ಅವರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಆದರೆ ಜೈಪುರದಲ್ಲಿ ಇದ್ದಾಗ ಅಕ್ಬರ್ ನನಗೆ ಫೋನ್ ಮಾಡಿ ತಾವಿರುವಲ್ಲಿಗೆ ಕರೆಸಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪಲ್ಲವಿ ಗಗೋಯ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *