ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

Public TV
1 Min Read

ಲಕ್ನೋ: ಮತಾಂತರ ಮಾಸ್ಟರ್‌ಮೈಂಡ್‌ ಛಂಗೂರ್‌ ಬಾಬಾನ (Chhangur Baba) ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಮತಾಂತರಕ್ಕಾಗಿ ಹಲವಾರು ಕೋಡ್‌ ವರ್ಡ್‌ಗಳನ್ನು ಬಳಸಿರುವುದು ಬಯಲಾಗಿದೆ.

‘ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಮತ್ತು ದರ್ಶನ’ ಇವು ಜಮಾಲುದ್ದೀನ್‌ ಅಲಿಯಾಸ್‌ ಛಂಗೂರ್‌ ಬಾಬಾ ಬಳಸುತ್ತಿದ್ದ ಕೋಡ್‌ ವರ್ಡ್‌ಗಳು. ಹೆಚ್ಚಾಗಿ ಮಹಿಳೆಯರನ್ನು, ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆಯ ಭರವಸೆ, ಬೆದರಿಕೆ ಮೂಲಕ ಮತಾಂತರಕ್ಕೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್‌ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್‌ – ಬುಲ್ಡೋಜರ್‌ನಿಂದ ನೆಲಸಮ

ಮಹಿಳೆಯರ ಮತಾಂತರಕ್ಕೆ ಪ್ರಾಜೆಕ್ಟ್‌, ಮಿಟ್ಟಿ ಪಲಟ್ನಾ ಎಂದರೆ ಧಾರ್ಮಿಕ ಮತಾಂತರ. ಕಾಜಲ್‌ ಲಗಾನಾ ಎಂದರೆ ಕುಶಲತೆ, ದರ್ಶನ ಎಂದರೆ ಸಂತ್ರಸ್ತೆ ಎಂದು ಸಂತ್ರಸ್ತರು ಎಂದು ಛಂಗೂರ್‌ ಬಾಬಾ ಉಲ್ಲೇಖಿಸುತ್ತಿದ್ದ.

ಈ ವಿವರಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬಹಿರಂಗಪಡಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಛಂಗೂರ್ ಬಾಬಾಗೆ ಸಂಬಂಧಿಸಿದ 18 ಬ್ಯಾಂಕ್ ಖಾತೆಗಳಿಂದ 68 ಕೋಟಿ ರೂ.ಗಳ ವಹಿವಾಟು ನಡೆದಿದೆ. ಮೂರು ತಿಂಗಳ ಅವಧಿಯಲ್ಲಿ ಈ ಖಾತೆಗಳಲ್ಲಿ ಸುಮಾರು 7 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಇದನ್ನೂ ಓದಿ: ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

ಜು.5 ರಂದು, ಧಾರ್ಮಿಕ ಮತಾಂತರ ಮಾಸ್ಟರ್‌ಮೈಂಡ್ ಛಂಗೂರ್ ಬಾಬಾ ಮತ್ತು ಆತನ ಸಹಾಯಕಿ ನೀತು ಅಲಿಯಾಸ್ ನಸ್ರೀನ್ ಇಬ್ಬರನ್ನೂ ಬಂಧಿಸಲಾಯಿತು. ಈ ಇಬ್ಬರು ನೇಪಾಳದ ಗಡಿಯಲ್ಲಿರುವ ಬಲರಾಂಪುರ ಜಿಲ್ಲೆಯ ಮಾಧಪುರ ನಿವಾಸಿಗಳು. ಜಲಾಲುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಆತನ ಬಂಧನಕ್ಕೆ 50,000 ರೂ. ನಗದು ಬಹುಮಾನ ಘೋಷಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Share This Article