ಮಿಥುನ್ ರೈ ವಿವಾದ : ಬಕೆಟ್ ಅಲ್ಲ, ಟ್ಯಾಂಕ್ ಹಿಡೀತಿನಿ ಎಂದ ರಕ್ಷಿತ್ ಶೆಟ್ಟಿ

Public TV
1 Min Read

ಡುಪಿ (Udupi) ಮಠಕ್ಕೆ (Math) ಜಾಗ ಕೊಟ್ಟಿದ್ದು ಮುಸ್ಲಿಂ ಎಂದು ಹೇಳುವ ಮೂಲಕ ವಿವಾದಕ್ಕೆ (Controversy) ಕಾರಣವಾಗಿದ್ದ ಮಿಥುನ್ ರೈ (Mithun Rai) ಮಾತಿಗೆ ಬೆಳಗ್ಗೆಯಷ್ಟೇ ನಟ ರಕ್ಷಿತ್ ಶೆಟ್ಟಿ (Rakshit Shetty) ಸೋಷಿಯಲ್ ಮೀಡಿಯಾ ಮೂಲಕ ತಿರುಗೇಟು ನೀಡಿದ್ದರು. ಸಾವಿರಾರು ವರ್ಷ ಇತಿಹಾಸವಿರುವ ದೇವಸ್ಥಾನದ ಬಗ್ಗೆ ತಿಳಿದುಕೊಂಡು ಮಾತನಾಡುವಂತೆ ಸಲಹೆ ಕೂಡ ನೀಡಿದ್ದರು. ರಕ್ಷಿತ್ ಮಾಡಿದ್ದ ಟ್ವೀಟ್ ಇದೀಗ ಪರ ವಿರೋಧಕ್ಕೆ ಕಾರಣವಾಗಿದೆ.

ಸೋಷಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ರಕ್ಷಿತ್ ಶೆಟ್ಟಿ ಈ ವಿವಾದದ ಕುರಿತಂತೆ ಬರೆದುಕೊಂಡಿದ್ದು, ಮಿಥುನ್ ರೈ ಹೆಸರನ್ನು ಬಳಸದೇ ತರಾಟೆಗೆ ತಗೆದುಕೊಂಡಿದ್ದಾರೆ. ‘ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮಿಥುನ್ ರೈ ಹೆಸರು ಬಳಸದೇ ಇದ್ದರೂ, ಇವರಿಗೆ ಕೊಟ್ಟ ಪ್ರತಿಕ್ರಿಯೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗೆ ರಕ್ಷಿತ್ ಶೆಟ್ಟಿ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಸ್ವತಃ ತಮ್ಮ ಮೇಲೆಯೇ ಹಲವರು ನೆಗೆಟಿವ್ ಕಾಮೆಂಟ್ ಮಾಡಿದಾಗಲೂ ರಕ್ಷಿತ್ ಮೌನವಹಿಸಿದ್ದರು. ಆದರೆ, ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಪೋಸ್ಟ್ ಗೆ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಒಬ್ಬರು ‘ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ. ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು’ ಎಂದು ಸಲಹೆ ನೀಡಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, ‘ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲಾ ಟ್ಯಾಂಕರ್ ಹಿಡಿತೀನಿ. ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆಂಬುದು ಖಚಿತವಾಗಿಲ್ಲ. ಕಾರ್ ಸ್ಟ್ರೀಟ್ ನಲ್ಲಿರುವ ಜಮೀನು ಖಂಡಿತವಾಗಿಯೂ ಅಲ್ಲ. ಅನಂತೇಶ್ವರ ದೇವಸ್ಥಾನವು ಕೃಷ್ಣಮಠಕ್ಕಿಂತಲೂ ಹಳೆಯದು. ಚಂದ್ರಮೌಳೀಶ್ವರ ದೇವಸ್ಥಾನ ಇನ್ನೂ ಹಳೆಯದು’ ಎಂದು ಇತಿಹಾಸ ಪಾಠ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *