ಶಾಲೆಯ ಬಿಸಿಯೂಟದಲ್ಲಿ ಹುಳ ಪತ್ತೆ – ಅಕ್ಷರ ದಾಸೋಹ ಇಲಾಖೆಯ ಮೂವರು ಅಧಿಕಾರಿಗಳು ಅಮಾನತು

1 Min Read

ಕೊಪ್ಪಳ: ಜಿಲ್ಲೆಯ ಕೆಲ ಶಾಲೆಗಳ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದ ಸಂಬಂಧ ಅಕ್ಷರ ದಾಸೋಹ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಶಿಕ್ಷಣ ಇಲಾಖೆ (Department Of Education) ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಅನಿತಾ ಹಾಗೂ ಇಬ್ಬರು ಸಹಾಯಕ ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಗುಡಿ, ಮಹಾಂತಯ್ಯ ಸೊಪ್ಪಿಮಠ ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಛತ್ತೀಸ್‍ಗಢ | 63 ನಕ್ಸಲರ ಸಾಮೂಹಿಕ ಶರಣಾಗತಿ – 36 ನಕ್ಸಲರ ಪತ್ತೆಗೆ 1.19 ಕೋಟಿ ರೂ. ಬಹುಮಾನ ಘೋಷಿಸಿದ್ದ ಸರ್ಕಾರ

ಕೊಪ್ಪಳ ತಾಲೂಕಿನ ನೃಪತುಂಗ ಶಾಲೆ, ನಿಂಗಾಪೂರ ಶಾಲೆ ಹಾಗೂ ಕುಷ್ಟಗಿ ತಾಲೂಕಿನ ಕೆಲ ಶಾಲೆಯ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದವು. ಈ ಕುರಿತು `ಪಬ್ಲಿಕ್ ಟಿವಿ’ ವಿಸ್ತ್ರತ ವರದಿ ಬಿತ್ತರಿಸಿತ್ತು. ಬಳಿಕ ಶಿಕ್ಷಣ ಇಲಾಖೆಯು ಉಪನಿರ್ದೇಶಕರಿಗೆ ವರದಿ ಕೇಳಿತ್ತು. ಇದೀಗ ಕರ್ತವ್ಯಲೋಪದಡಿ ಮೂವರನ್ನು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

 

Share This Article