ಕಾಂಗ್ರೆಸ್ ಪರ ತಮ್ಮ ವಿಡಿಯೋ ದುರ್ಬಳಕೆ: ಗರಂ ಆದ ಅಲ್ಲು ಅರ್ಜುನ್

Public TV
1 Min Read

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ವಿಡಿಯೋವೊಂದನ್ನು (Video) ಕಾಂಗ್ರೆಸ್ ಪಕ್ಷದ ಪರವಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಅಲ್ಲು ಅರ್ಜುನ್ ಗರಂ ಆಗಿದ್ದಾರೆ. ತಮ್ಮ ಈ ವಿಡಿಯೋವನ್ನು ಬಳಕೆ ಮಾಡಿಕೊಂಡಿದ್ದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಬಾಲಿವುಡ್ ನ ಆಮೀರ್ ಖಾನ್ ಮತ್ತು ರಣವೀರ್ ಸಿಂಗ್ ಅವರ ವಾಯ್ಸ್ ಅನ್ನು ಇದೇ ರೀತಿ ಬಳಕೆ ಮಾಡಿಕೊಳ್ಳಲಾಗಿತ್ತು. ದೂರು ಕೂಡ ದಾಖಲಾಗಿತ್ತು.

ಅಲ್ಲು ಅರ್ಜುನ್ 2022ರಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ನಡೆದ ವಾರ್ಷಿಕ ಭಾರತೀಯ ದಿನದ ಪರೇಡ್ ನಲ್ಲಿ ಭಾಗಿಯಾಗಿದ್ದರು. ಅಲ್ಲಿ ರ‍್ಯಾಲಿ ನಡೆದಾಗ ಅದರಲ್ಲಿ ಪಾಲ್ಗೊಂಡಿದ್ದರು. ಆ ವಿಡಿಯೋವನ್ನು ಕಾಂಗ್ರೆಸ್ (Congress) ಪರ ಅಲ್ಲು ಪ್ರಚಾರ ಮಾಡುತ್ತಿದ್ದಾರೆ ಎಂದು ಚುನಾವಣೆ ಸಂದರ್ಭದಲ್ಲಿ ಬಳಕೆ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಜನರು ಶೇರ್ ಕೂಡ ಮಾಡಿದ್ದಾರೆ.

 

ಹೆಚ್ಚೆಚ್ಚು ಶೇರ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅಲ್ಲು ಅರ್ಜುನ್, ಆ ವಿಡಿಯೋದ ನಿಜ ಸತ್ಯವನ್ನು ಹೇಳಿಕೊಂಡಿದ್ದಾರೆ. ತಾವು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Share This Article