– ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್‌ನಿಂದ ಕಳಿಸಲಾಗಿದ್ದ ಶೆರಿಯಾರ್ ಸಿಂಹ
ಚೆನ್ನೈ/ಬೆಂಗಳೂರು: ತಮಿಳುನಾಡಿನ ವಂಡಾಲೂರು ಮೃಗಾಲಯಕ್ಕೆ (Vandalur Zoo) ಬೆಂಗಳೂರಿನಿಂದ ಕಳಿಸಲಾಗಿದ್ದ ಸಿಂಹವೊಂದು ರಾತ್ರೋರಾತ್ರಿ ನಾಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. 2 ದಿನಗಳ ಬಳಿಕ ಸಿಂಹ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಶೆರಿಯಾರ್ ಹೆಸರಿನ 5 ವರ್ಷದ ಗಂಡು ಸಿಂಹವನ್ನು (Lion Sheryaar) ಗುರುವಾರ (ಅ.02) ಮೊದಲ ಬಾರಿಗೆ ಸಫಾರಿ ವಲಯಕ್ಕೆ ಬಿಡಲಾಗಿತ್ತು. ಆದರೆ, ನಿಗದಿತ ಸಮಯ ಕಳೆದರೂ ಸಿಂಹ ಮಾತ್ರ ಬೋನಿಗೆ ವಾಪಸ್ಸಾಗಲಿಲ್ಲ. ಶನಿವಾರ ಸಂಜೆಯವರೆಗೂ ಸಿಂಹ ಬೋನಿಗೆ ಹಿಂತಿರುಗಲಿಲ್ಲ ಎಂದು ವರದಿಯಾಗಿತ್ತು. ಇದರಿಂದ ಆಘಾತಗೊಂಡ ಮೃಗಾಲಯದ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕಾಗಿ ರಾಯಚೂರಿನಿಂದ ಕೊಪ್ಪಳಕ್ಕೆ 200 ಬಸ್ – ಇತ್ತ ಬಸ್ಸಿಲ್ಲದೇ ಪ್ರಯಾಣಿಕರ ಪರದಾಟ
ನಾಪತ್ತೆಯಾಗಿದ್ದ ಶೆರಿಯಾರ್ ಸಿಂಹವನ್ನು ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ದತ್ತು ಪಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮೃಗಾಲಯದ ಸಿಬ್ಬಂದಿ ಮತ್ತು ವಿಶೇಷ ತಂಡ ರಾತ್ರಿಯಿಡೀ ಪ್ರದೇಶದಲ್ಲಿ ಹುಡುಕಾಟ ನಡೆಸಿತ್ತು. ಅಕ್ಟೋಬರ್ 4 ರಂದು ಶೆರಿಯಾರ್ ಸಿಂಹ ಸಫಾರಿ ವಲಯದೊಳಗೆ ಕಾಣಿಸಿಕೊಂಡ ಬಳಿಕ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಒಂದೂವರೆ ವರ್ಷದಿಂದ ರೈತರಿಗೆ ಕಾಟ ಕೊಡ್ತಿದ್ದ ಪುಂಡಾನೆ ಸೆರೆ
ಶೆರಿಯಾರ್ ಸಿಂಹವನ್ನು 2023ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ 2023ರಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಿಂದ ವಂಡಲೂರಿಗೆ ತರಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ – ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ