ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

Public TV
2 Min Read

ದಾವಣಗೆರೆ: ಕಾಣೆಯಾಗಿದ್ದ ಮಹಿಳೆಯೊಬ್ಬರ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಿಟ್ಟೂರು ಗ್ರಾಮದ ಕವಿತಾ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ. ಈಕೆ ವಿವಾಹಿತೆಯಾಗಿದ್ದು, ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎಂಬಾತನ ಜೊತೆ ಅಕ್ರಮ ಸಂಬಂಧವನ್ನು (Illicit Relationship) ಹೊಂದಿದ್ದಳು. ಕಳೆದ ಫೆಬ್ರವರಿ 23ರಂದು ಕವಿತಾ ಹಾಗೂ ಸಲೀಂ ನಡುವೆ ಜಗಳ ನಡೆದಿತ್ತು. ಬಳಿಕ ಸಲೀಂ ಕವಿತಾಳನ್ನು ಬೈಕಿನಲ್ಲಿ ಕೂರಿಸಿಕೊಂಡು ಕುಂಚೂರು ಕೆರೆಯ ನಿರ್ಜನ ಪ್ರದೇಶಕ್ಕೆ ತೆರಳಿದ್ದ. ಇದನ್ನೂ ಓದಿ: ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

ನಿರ್ಜನ ಪ್ರದೇಶಕ್ಕೆ ಕವಿತಾಳನ್ನು ಕರೆದೊಯ್ದ ಸಲೀಂ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಅಲ್ಲಿಯೇ ಸುಟ್ಟು ಹಾಕಿದ್ದಾನೆ. ದಾವಣಗೆರೆಯ ಅಲೂರು ಗ್ರಾಮದಲ್ಲಿದ್ದ ಕವಿತ ಕಳೆದ ಫೆಬ್ರವರಿ 23 ರಂದು ಹರಿಹರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಬಂದಿರಲಿಲ್ಲ. ಅಲ್ಲದೆ ಗಂಡನ ಮನೆ ನಿಟ್ಟೂರಿಗೂ ಕೂಡ ಹೋಗದ ಕಾರಣ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಗೂಡ್ಸ್ ರೈಲಿನಡಿಯಿಂದ ಹಳಿ ದಾಟಲು ಮುಂದಾಗಿ ಮಹಿಳೆ ತಲೆಗೆ ಗಂಭೀರ ಗಾಯ!

ಯಾವಾಗಲೂ ಪೋನ್ ಬ್ಯೂಝಿ ಬರ್ತಾ ಇರುತ್ತದೆ. ನನ್ನನ್ನು ಬಿಟ್ಟು ಬೇರೊಬ್ಬನ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಸಲೀಂ ಕವಿತಾಳನ್ನು ಪ್ರಶ್ನೆಸಿ ಜೋರಾಗಿ ಜಗಳವಾಡಿದ್ದಾರೆ. ಅಲ್ಲದೇ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಸಲೀಂ ಕವಿತಾಳ ಕತ್ತು ಹಿಸುಕಿ ಸಾಯಿಸಿದ್ದಾನೆ, ಈ ವಿಷಯ ಯಾರಿಗೂ ಗೊತ್ತಾಗದಂತೆ ತಡೆಯಲು ಸಲೀಂ ಪರಿಚಯಸ್ಥರ ಜಮೀನಿನಲ್ಲಿ ಆಕೆಯ ಶವ ಕಟ್ಟಿಗೆಯಲ್ಲಿ ಸುಟ್ಟು ಹಾಕಿ ಮನೆಗೆ ಹಿಂತಿರುಗಿದ್ದಾನೆ. ಇದನ್ನೂ ಓದಿ: ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

ಕಳೆದ ಕೆಲ ದಿನಗಳ ನಂತರ ಅಲ್ಲಿ ನಡೆದಿರುವ ಘಟನೆಯನ್ನು ಆರೋಪಿ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದಾನೆ.‌ ನೀನು ಕೂಡ ಅದೇ ಸಮುದಾಯಕ್ಕೆ ಸೇರಿದ ವ್ಯಕ್ತಿ ನೀನು ನನ್ನನ್ನು ಕಾಪಾಡು. ನನಗೆ ಹೆಂಡತಿ ಮಕ್ಕಳಿದ್ದಾರೆ ಎಂದು ಬೇಡಿಕೊಂಡ ಹಿನ್ನೆಲೆ ಪ್ರಕರಣ ಬಯಲಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಈ ಕುರಿತು ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಾರ್ಶ್ವವಾಯು ಬಾರದಂತೆ 150 ರೂ. ಇಂಜೆಕ್ಷನ್ ಪಡೆದ CA – ಕೆಲವೇ ನಿಮಿಷಗಳಲ್ಲಿ ಆರೋಗ್ಯವಂತ ಮಹಿಳೆ ಸಾವು

Share This Article