ನವದೆಹಲಿ: ಒಂದು ವಾರದಿಂದ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಶವ ಯಮುನಾ ನದಿಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (19) ತ್ರಿಪುರಾ ನಿವಾಸಿಯಾಗಿದ್ದು, ಆಕೆಯ ಕುಟುಂಬಸ್ಥರು ಶವವನ್ನು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ವಿಫಲನಾಗಿದ್ದೇನೆ ಎನಿಸುತ್ತಿದೆ – ದೆಹಲಿಯಲ್ಲಿ ಕಾಣೆಯಾದ ಯುವತಿಯ ರೂಮ್‌ನಲ್ಲಿ ಡೆತ್‌ನೋಟ್ ಪತ್ತೆ
ಜುಲೈ 7 ರ ಮುಂಜಾನೆ ಸ್ನೇಹಾ ತನ್ನ ಆಪ್ತ ಸ್ನೇಹಿತರಿಗೆ ಇಮೇಲ್‌ಗಳು ಮತ್ತು ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಭಾವನಾತ್ಮಕವಾಗಿ ಸಮಸ್ಯೆ ಎದುರಿಸುತ್ತಿದ್ದರು ಎಂದು ಆಕೆಯ ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಸ್ನೇಹಾರ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ʻನಾನು ವಿಫಲನಾಗಿದ್ದೇನೆ, ಎಂದು ಎನಿಸುತ್ತಿದೆ. ಸೇತುವೆಯಿಂದ ಹಾರಿ ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ಹೊರೆಯಂತೆ ಬಾಸವಾಗುತ್ತಿದ್ದೇನೆ. ಈ ರೀತಿ ಬದುಕಲು ಸಾಧ್ಯವಾಗುತ್ತಿಲ್ಲ. ಇದು ನನ್ನ ನಿರ್ಧಾರ ಎಂದು ಪತ್ರದಲ್ಲಿ ಬರೆದಿದ್ದರು.
ಆತ್ಮ ರಾಮ ಸನಾತನ ಧರ್ಮ ಕಾಲೇಜಿನಲ್ಲಿ ಸ್ನೇಹಾ ದೇಬ್ನಾಥ್ ವ್ಯಾಸಾಂಗ ಮಾಡುತ್ತಿದ್ದರು.ಅವರು ಮೂಲತಃ (Tripura) ತ್ರಿಪುರದವರಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದರು. ಜುಲೈ 7 ರಂದು, ಅವರು ತಮ್ಮ ಸ್ನೇಹಿತೆಯನ್ನು ಸರೈ ರೋಹಿಲ್ಲಾ ರೈಲ್ವೆ ನಿಲ್ದಾಣದಲ್ಲಿ ಬಿಡಲು ಹೋಗಿದ್ದರು. ಅಂದಿನಿಂದ ಅವರು ಕಾಣೆಯಾಗಿದ್ದರು. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!