ಹುಬ್ಬಳ್ಳಿಯ ಮಿಸ್ಸಿಂಗ್ ಬಾಯ್ ಸ್ಪೀಡನ್ನಿನ ನಂಟು!

Public TV
1 Min Read

ಬೆಂಗಳೂರು: ಮನಮಿಡಿಯುವ ಸತ್ಯ ಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಈ ಚಿತ್ರ ನಿರ್ದೇಶಕ ರಘು ರಾಮ್ ಅವರ ಕನಸಿನ ಕೂಸು ಎಂಬುದು ಗೊತ್ತೇ ಇದೆ. ಆದ್ರೆ ಇದು ಕರ್ನಾಟಕದ ಯಾವ ಮೂಲೆಯಲ್ಲಿ ನಡೆದಿರೋ ಕಥೆ. ನಿಜಕ್ಕೂ ಇದು ಸತ್ಯ ಕಥೆಯಾ ಎಂಬೆಲ್ಲ ಗೊಂದಲಗಳು ಹಲವರಲ್ಲಿದೆ!

ಈ ಬಗ್ಗೆ ಒಂದಷ್ಟು ಸುಳಿವುಗಳನ್ನು ನಿರ್ದೇಶಕರೇ ಬಿಟ್ಟು ಕೊಟ್ಟಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಿರೋ ರಿಯಲ್ ಕಥೆಯಲ್ಲಿ ಹುಡುಗ ಮಿಸ್ ಆಗೋದು ಹುಬ್ಬಳ್ಳಿಯಿಂದ. ರಘುರಾಮ್ ಚಿತ್ರವನ್ನೂ ಕೂಡಾ ಅಲ್ಲಿಂದಲೇ ಆರಂಭಿಸಿದ್ದಾರೆ. ಹುಬ್ಬಳ್ಳಿಯ ಸುಂದರ ಲೊಕೇಷನ್ನುಗಳನ್ನೂ ಕೂಡಾ ಸೆರೆ ಹಿಡಿದಿದ್ದಾರೆ.

ಅಚ್ಚರಿ ಅಂದರೆ, ನಮ್ಮ ಕರ್ನಾಟಕದ ಹುಬ್ಬಳ್ಳಿಗೂ ದೂರದ ದೇಶ ಸ್ವೀಡನ್ನಿಗೂ ನೇರಾ ನೇರ ಲಿಂಕಿದೆ. ಹುಬ್ಬಳ್ಳಿಯಿಂದ ಮಿಸ್ ಆದ ಆ ಪುಟ್ಟ ಹುಡುಗ ಸ್ವೀಡನ್ ದೇಶಕ್ಕೆ ಅದು ಹೇಗೆ ಹೋಗುತ್ತಾನೆ? ತನ್ನ ಹೆತ್ತವರು ಮತ್ತು ಊರ ನೆನಪನ್ನು ಎದೆಯೊಳಗಿಟ್ಟುಕೊಂಡು ಅದು ಹೇಗೆ ವಾಪಾಸಾಗ್ತಾನೆ? ಅಷ್ಟಕ್ಕೂ ಕಡೆಗೂ ಆತನಿಗೆ ಹೆತ್ತವರು ಸಿಕ್ತಾರಾ? ಇಂಥಾ ಕ್ಯೂರಿಯಾಸಿಟಿಗಳಿಗೆಲ್ಲ ಸದ್ಯದಲ್ಲೇ ಉತ್ತರ ಸಿಗಲಿದೆ.

ಅಂತೂ ಮಾಮೂಲಿ ಚಿತ್ರಗಳಲ್ಲಿ ಸಿಗದಂಥಾ ಭಾವ ತೀವ್ರತೆ, ಪ್ರತೀ ಫ್ರೇಮಿನಲ್ಲಿಯೂ ಕಾಡುವಂಥಾ ಗುಣಗಳೊಂದಿಗೆ ಈ ಚಿತ್ರ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳೋದಂತೂ ಗ್ಯಾರಂಟಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *