ಕೈ-ಕಾಲು ಕತ್ತರಿಸಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ

Public TV
1 Min Read

ಬಾಗಲಕೋಟೆ: ಮನೆಯಿಂದ ನಾಪತ್ತೆಯಾಗಿದ್ದ ಬಾಲಕ ಕೈ-ಕಾಲು ಕತ್ತರಿಸಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದಿದೆ.

13 ವರ್ಷದ ಸತೀಶ್ ಗಿರಿಯಪ್ಪ ಪೂಜಾರಿ ಎಂಬಾತನೇ ಕೊಲೆಯಾದ ಬಾಲಕನಾಗಿದ್ದು, ಈತ ಮೇ 13 ರಂದು ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದನು. ಆದರೆ ಈಗ ಕೂಡಲಸಂಗಮದ ಬಳಿ ನದಿ ದಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಬಾಲಕನ ಕೈ-ಕಾಲು ಕತ್ತರಿಸಿದ ಸ್ಥಿತಿಯಲ್ಲಿದ್ದು, ಬಾಲಕ ಹೇಗೆ ಮೃತಪಟ್ಟಿದ್ದಾನೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಶವ ಕೊಳೆತು ತಲೆ ಬುರುಡೆ ಮಾತ್ರ ಕಾಣಿಸಿಕೊಂಡಿದೆ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಯುವಕನ ಕೊಲೆ ನಡೆದಿರೋದು ಹೇಗೆ? ಕೊಲೆಯಾಗಲು ಕಾರಣ ಏನು? ಎನ್ನುವ ಬಗ್ಗೆ ಪರಿಶೀಲನೆ ನಂತರ ಉತ್ತರ ದೊರೆಯಲಿದೆ.

ಬಾಲಕನ ಈ ದಾರುಣ ಸಾವು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಕ್ಕಳನ್ನು ಕಿಡ್ನಾಪ್ ಮಾಡಿ ಅಂಗಾಂಗಗಳನ್ನು ಕರೆದೊಯ್ಯಲಾಗುತ್ತಿದೆ ಎಂಬ ಸುದ್ದಿಗೆ ಇದು ಪೂರಕ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಇದು ಮಕ್ಕಳ ಕಳ್ಳರು ಮಾಡಿರುವ ಕೃತ್ಯವಲ್ಲ, ಈ ಬಗ್ಗೆ ಪೊಲೀಸ್ ತನಿಖೆಯ ನಂತ್ರ ಸತ್ಯಾಸತ್ಯತೆ ಸದ್ಯದಲ್ಲೇ ಹೊರಬೀಳಲಿದೆ ಎಂದು ಎಸ್ ಪಿ ವಂಶಿಕೃಷ್ಣ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *