Miss World 2024: ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ ಪಿಸ್ಕೋವಾ

By
1 Min Read

ವಿಶ್ವ ಸುಂದರಿ ಸ್ಪರ್ಧೆಯು (Miss World 2024) ಇಂದು (ಮಾ.9) ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ. ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ (Krystyna Pyszkova) ಗೆದ್ದು ಬೀಗಿದ್ದಾರೆ.

71ನೇ ಸಾಲಿನ ಮಿಸ್ ವರ್ಲ್ಡ್ ಕಾರ್ಯಕ್ರಮದಲ್ಲಿ ಕ್ರಿಸ್ಟಿನಾ ವಿನ್ನರ್ ಆಗಿದ್ದಾರೆ. ಈ ಮೊದಲು ಭಾರತದ ಐಶ್ವರ್ಯಾ, ಪ್ರಿಯಾಂಕಾ ಚೋಪ್ರಾ ಮೊದಲಾದವರು ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಿದ್ದರು. ‘ಮಿಸ್ ವರ್ಲ್ಡ್’ ಸ್ಪರ್ಧೆಗೆ 12 ಜಡ್ಜ್‌ಗಳ ಪ್ಯಾನಲ್ ಇತ್ತು. ಬಾಲಿವುಡ್ ಬೆಡಗಿ ಕೃತಿ ಸನೋನ್, ಪೂಜಾ ಹೆಗ್ಡೆ ಮೊದಲಾದವರು ಇದರ ಜಡ್ಜ್ ಆಗಿದ್ದರು.

ಕ್ರಿಸ್ಟಿನಾ ಅವರು ವಿದ್ಯಾರ್ಥಿನಿ. ಅವರು ಅಂತಾರಾಷ್ಟ್ರೀಯ ಮಾಡೆಲ್ ಕೂಡ ಹೌದು. ಲಾ ಹಾಗೂ ಬಿಸ್ನೆಸ್ ಅಡ್ಮಿಸ್ಟ್ರೇಷನ್‌ಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ತಮ್ಮದೇ ಫೌಂಡೇಷನ್ ಆರಂಭಿಸಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಅವರು ತಂಜಾನಿಯಾದಲ್ಲಿ ಬಡ ಮಕ್ಕಳಿಗಾಗಿ ಇಂಗ್ಲಿಷ್ ಸ್ಕೂಲ್ ಓಪನ್ ಮಾಡಿದ್ದಾರೆ. ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

Share This Article