ಸರಕಾರಿ ಶಾಲೆ ಉಳಿವಿಗೆ ‘ಮಿಸ್ ನಂದಿನಿ’ ಆದ ಪ್ರಿಯಾಂಕಾ : ಕ್ಲೈಮಾಕ್ಸ್ ಹಂತದಲ್ಲಿ ಸಿನಿಮಾ

Public TV
1 Min Read

ಪ್ರಿಯಾಂಕಾ ಉಪೇಂದ್ರ ನಟನೆಯ ’ಮಿಸ್‌ನಂದಿನಿ’ ಸಿನಿಮಾದ ಚಿತ್ರೀಕರಣವು ಬೆಂಗಳೂರು ಹೊರವಲಯದಲ್ಲಿರುವ ಬೆಟ್ಟಹಳ್ಳಿಯಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಚಿತ್ರತಂಡ ಹಲವು ವಿಚಾರಗಳನ್ನು ಹಂಚಿಕೊಂಡಿತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

ನಿರ್ದೇಶಕ ಗುರುದತ್ತ ಮಾತನಾಡಿ, “ಎಡಿಟಿಂಗ್, ಆರ್‌ಆರ್ ಏಕಕಾಲಕ್ಕೆ ಮುಗಿಸಲಾಗಿದೆ. ಕಡೂರು, ಚಿಕ್ಕಮಗಳೂರು, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ 35 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಸರ್ಕಾರಿ ಕನ್ನಡ ಶಾಲೆ ಉಳಿಸಬೇಕು ಎನ್ನುವ ಪರಿಕಲ್ಪನೆಯೊಂದಿಗೆ ಚಿತ್ರವು ಸಾಗುತ್ತದೆ. ಕಾನ್ವೆಂಟ್ ಶಾಲೆಯಂತೆ ಬೆಳಯಬೇಕು. ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ಆಶಾ ಸಹ ನಿರ್ಮಾಪಕರು. ಸಾರ್ವತ್ರಿಕ ವಿಷಯವಾಗಿರುವುದರಿಂದ ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲೆಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ. ಓಟಿಟಿದಿಂದ ಬೇಡಿಕೆ ಬಂದಿದೆ. ಇನ್ನು ನಿರ್ಣಯ ತೆಗೆದುಕೊಂಡಿಲ್ಲ’ ಎಂದರು. ಇದನ್ನೂ ಓದಿ : ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ : ಭದ್ರತೆ ಹೆಚ್ಚಿಸಲು ನಿರ್ಧಾರ

“ಬೆಂಗಳೂರಿನಿಂದ ಶಿಕ್ಷಕಿಯಾಗಿ ಇಲ್ಲಿಗೆ ಬಂದು ಪರಿವರ್ತನೆ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನು ಸಹ ಅಮೇರಿಕಾದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದವಳು. ಅರ್ಥಪೂರ್ಣ ಸಂದೇಶವನ್ನು ಹಾಸ್ಯದ ಅಂಶಗಳೊಂದಿಗೆ ಹೇಳಲಾಗಿದೆ. ಮೃಧು ಆದರೂ ಕೆಲವು ಕಡೆ ಶಕ್ತಿಶಾಲಿಯಾಗಿರುತ್ತೇನೆಂದು ಮತ್ತು ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇಮೆ’ ಅಂದರು ಪ್ರಿಯಾಂಕ ಉಪೇಂದ್ರ. ಇದನ್ನೂ ಓದಿ : ಕನ್ನಡಕ್ಕೂ ನಂಟು ಹೊಂದಿದ್ದರು ಅಗಲಿದ ಖ್ಯಾತ ಗಾಯಕ ಕೆಕೆ

ಶಾರದೆ, ನಾಡು ನುಡಿ, ತಾಯಿ ಹಾಗೂ ರಾಜ್ಯೋತ್ಸವ ಕುರಿತಂತೆ ನಾಲ್ಕು ಹಾಡುಗಳು ಸಿನಿಮಾದಲ್ಲಿದ್ದು, ವಿಜಯ ಪ್ರಕಾಶ್, ವಾಸುಕಿ ವೈಭವ್, ಅನುರಾಧ ಭಟ್ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಸಾಯಿ ಸರ್ವೇಶ್ ಅವರದ್ದು. ವಿದ್ಯಾರ್ಥಿ ತಾಯಿಯಾಗಿ ಭವ್ಯಾ, ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುವ ಡ್ಯಾನಿಕುಟ್ಟಪ್ಪ, ಖಳ ನಟ ರತನ್, ’ಕೆಜಿಎಫ್’ದಲ್ಲಿ ಜ್ಯೂನಿಯರ್ ರಾಕಿಬಾಯಿ ಆಗಿ ನಟನೆ ಮಾಡಿದ್ದ ಅನ್‌ಮೋಲ್, ಚಿಣ್ಣರುಗಳಾದ ಸೃಷ್ಟಿ, ಶೃತಿ, ಛಾಯಾಗ್ರಾಹಕ ನಾಗರಾಜವೀನಸ್ ಮುಂತಾದವರು ಸುದ್ದಿಗೋಷ್ಟಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *