ಪಿಸ್ತೂಲ್ ಪರಿಶೀಲನೆ ವೇಳೆ ಮಿಸ್ ಫೈರಿಂಗ್- ಪೇದೆ ಕಾಲಿಗೆ ಗುಂಡೇಟು

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಪೊಲೀಸ್ ಠಾಣೆಗೆ ಪಿಸ್ತೂಲ್ ಜಮೆ ಮಾಡಿದ್ರು. ಆದರೆ ಪಿಸ್ತೂಲ್ ಠಾಣೆಗೆ ತಂದು ಕೊಟ್ಟ ವ್ಯಕ್ತಿ ಮಾಡಿದ ಎಡವಟ್ಟಿನಿಂದ ಠಾಣೆಯಲ್ಲೇ ದುರ್ಘಟನೆಯೊಂದು ನಡೆದು ಹೋಗಿದೆ.

ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರು ಪೊಲೀಸ್ ಠಾಣೆಗೆ (Beguru Police Station)  ಮುಕುಂದ ರೆಡ್ಡಿ ಎಂಬವರು ಪಿಸ್ತೂಲ್ ತಂದು ಜಮಾ ಮಾಡಿದರು. ಪೊಲೀಸ್ ಕಾನ್ಸ್ ಟೇಬಲ್ ಪಿಸ್ತೂಲು ಪರಿಶೀಲನೆ ವೇಳೆ ಟ್ರಿಗರ್ ಒತ್ತಿದ್ದಾರೆ. ಈ ವೇಳೆ ಏಕಾಏಕಿ ಮಿಸ್ ಫೈರ್ ಆಗಿ, ಮತ್ತೊಬ್ಬ ಪೊಲೀಸ್ ಪೇದೆ ಅಂಬುದಾಸ್ ಕಾಲಿಗೆ ಗುಂಡೇಟು ತಗುಲಿದೆ. ಗಾಯಾಳುವನ್ನು ಅಪೊಲೋ ಆಸ್ಪತ್ರೆಗೆ ದಾಖಸಲಾಗಿದೆ.

ಈ ಘಟನೆಯಿಂದ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ ಎಫ್‍ಎಸ್‍ಎಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಬೇಗೂರು ಪೊಲೀಸ್ ಠಾಣೆಯ ಮೇಲಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಪೊಲೀಸ್ ಠಾಣೆಗಳಿಗೆ ಬಂದುಕು ಅಥವಾ ಪಿಸ್ತೂಲ್‍ಗಳನ್ನು ಸೆರೆಂಡರ್ ಮಾಡುವ ಮುನ್ನ ಎಚ್ಚರವಹಿಸಬೇಕಾಗಿದೆ.

Share This Article