ಗದಗ | ಶಿವರಾತ್ರಿಯಂದೇ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿಗಳು

1 Min Read

ಗದಗ: ನಾಡಿನೆಲ್ಲಡೆ ಮಹಾ ಶಿವರಾತ್ರಿ (Shivaratri) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಶಿವನ ಆರಾಧನೆ ದಿನವೇ ದುಷ್ಕರ್ಮಿಗಳು ಶಿವಲಿಂಗ (Shivalinga) ಹಾಗೂ ನಂದಿ ವಿಗ್ರಹ ಭಗ್ನಗೊಳಿಸಿದ ಘಟನೆ ಮುಂಡರಗಿ (Mundaragi) ತಾಲೂಕಿನ ಶಿಂಗಟಾಲೂರ ಬಳಿ ನಡೆದಿದೆ.

ಗ್ರಾಮದ ಹೊರವಲಯದ ಶ್ರೀ ರಾಮಲಿಂಗೇಶ್ವರ, ನಂದಿ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ಈ ದುಷ್ಕೃತ್ಯ ಮೆರೆದಿದ್ದಾರೆ. ಮಹಾ ಶಿವರಾತ್ರಿ ಹಿನ್ನೆಲೆ ಗ್ರಾಮಸ್ಥರು ಶನಿವಾರ (ಫೆ.15) ದೇವಸ್ಥಾನಕ್ಕೆ ಸುಣ್ಣ, ಬಣ್ಣ ಹಚ್ಚಿ ಬಂದಿದ್ದರು. ಬೆಳಿಗ್ಗೆ ಪೂಜೆಗೆ ತೆರಳಿದಾಗ ಮೂರ್ತಿ ಭಗ್ನವಾಗಿರುವ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮುಜರಾಯಿ ಇಲಾಖೆ ನಿರ್ಲಕ್ಷ್ಯ – ಪಾಳು ಬಿದ್ದ 140 ವರ್ಷ ಇತಿಹಾಸವುಳ್ಳ ಪುರಾತನ ದೇವಾಲಯ!

ರಾಮಲಿಂಗೇಶ್ವರ ಲಿಂಗದ ಪಾಣಿಬಟ್ಟಲು, ಎದುರಿನ ನಂದಿ ವಿಗ್ರಹದ ಮುಖ ಹಾಗೂ ದೇವಸ್ಥಾನದ ಹಿಂಭಾಗದಲ್ಲಿನ ಹೊನ್ನತ್ತೆಮ್ಮ ದೇವಿಯನ್ನೂ ವಿರೂಪ ಗೋಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ, ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಮಹಾರುದ್ರಾಭಿಷೇಕ

Share This Article