ಗವಿಗಂಗಾಧರ ದೇಗುಲದಲ್ಲಿ ಇಂದು ಬೆಳಕಿನ ಚಮತ್ಕಾರ

Public TV
1 Min Read

ಬೆಂಗಳೂರು: ಸಂಕ್ರಾಂತಿ ಹಬ್ಬದಂದು ನಾಡಿನ ಜನತೆ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷ ಸಂಕ್ರಾಂತಿ ಸಡಗರದಲ್ಲಿ ಗವಿಗಂಗಾಧರ ದೇಗುಲದಲ್ಲಿ ಬೆಳಕಿನ ಚಮತ್ಕಾರ ನಡೆಯಲಿದೆ. ಇಂದು ಸಂಜೆ ಸೂರ್ಯಾಸ್ತವಾಗುವ ಸಮಯದಲ್ಲಿ ಗಂಗಾಧರನಿಗೆ ಸೂರ್ಯ ಜಳಕ, ಭಾಸ್ಕರನ ನಮನದ ಕೌತುಕ ನಡೆಯಲಿದೆ.

ಮಕರ ಸಂಕ್ರಾಂತಿ, ಸೂರ್ಯ ತನ್ನ ಪಥವನ್ನು ಬದಲಿಸುವ ಪರ್ವಕಾಲ. ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಒಂದೊಂದು ಕಡೆ ಒಂದೊಂದು ರೀತಿ ಹಬ್ಬ ಆಚರಿಸಲಾಗುತ್ತೆ. ಅದ್ರಲ್ಲೂ ಬೆಂಗಳೂರಿನ ವಿವಿ ಪುರಂನಲ್ಲಿರುವ ಗವಿಗಂಗಾಧರ ದೇಗುಲದಲ್ಲಿ ದೈವಿಕ -ಪ್ರಾಕೃತಿಕ ವಿಸ್ಮಯವೊಂದು ನಡೆಯಲಿದೆ. ಸಂಜೆ ಸುಮಾರು 5.20ಕ್ಕೆ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವ ಸೂರ್ಯ ಗವಿಗಂಗಾಧರನಿಗೆ ನಮಿಸಿ ಮುಂದೆ ಸಾಗಲಿದ್ದಾನೆ. ನಂದಿಯ ಕೋಡಿನಿಂದ ಹಾದು ಬರುವ ಸೂರ್ಯನ ಬೆಳಕು ನಿಧಾನವಾಗಿ ಶಿವಲಿಂಗದ ಮೇಲೆ ಬೀಳಲಿದೆ.

ಈ ವಿಸ್ಮಯ ನಡೆಯುವಾಗ ದೇಗುಲದೊಳಗೆ ಭಕ್ತರಿಗೆ ಅವಕಾಶವಿರಲ್ಲ. ಆದ್ರೆ ಹೊರಗಡೆ 2 ಎಲ್‍ಸಿಡಿ, 10 ಎಲ್‍ಇಡಿ ಸ್ಕ್ರೀನ್ ಗಳಲ್ಲಿ ವಿಸ್ಮಯದ ದೃಶ್ಯ ನೇರಪ್ರಸಾರ ಇರಲಿದೆ. ಕಳೆದ ವರ್ಷ ಮೊದಲ ಬಾರಿಗೆ ಸುದೀರ್ಘ ಕಾಲ ಬೆಳಕಿನ ಚಮತ್ಕಾರ ನಡೆದಿತ್ತು. ಈ ಬಾರಿ ಯಾವ ರೀತಿ ನಡೆಯುತ್ತೆ ಅನ್ನುವ ಕುತೂಹಲ ಭಕ್ತರಲ್ಲಿ ಮನೆ ಮಾಡಿದೆ. ಭೌಗೋಳಿಕ ವಿಸ್ಮಯ ಹಾಗೂ ದೈವಿಕ ವಿಸ್ಮಯಕ್ಕೆ ಇಂದು ಗವಿಗಂಗಾಧರ ದೇಗುಲ ಸಾಕ್ಷಿಯಾಗಲಿದೆ. ಈ ಚಮತ್ಕಾರವನ್ನು ನೀವು ಪಬ್ಲಿಕ್ ಟಿವಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *