– ಆರು ತಿಂಗಳಲ್ಲಿ ಹಲವು ಬಾರಿ ರೇಪ್
ಮುಂಬೈ: ವ್ಯಕ್ತಿಯೊಬ್ಬ ಮದುವೆಯಾಗಲೂ ನಿರಾಕರಿಸಿದ್ದಕ್ಕೆ ಅಪ್ರಾಪ್ತೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.
ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದೆ. ಈತ 17 ವರ್ಷದ ಅಪ್ರಾಪ್ತೆಯ ಜೊತೆ ಸಂಬಂಧ ಹೊಂದಿದ್ದನು. ಅಲ್ಲದೇ ಕಳೆದ ಆರು ತಿಂಗಳಲ್ಲಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಇತ್ತೀಚೆಗೆ ಹುಡುಗಿ ಮತ್ತು ಆಕೆಯ ತಾಯಿಯ ಬಳಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾನೆ. ಆಗ ತಾಯಿ ಮತ್ತು ಅಪ್ರಾಪ್ತೆ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಇಬ್ಬರ ಮೇಲು ಹಲ್ಲೆ ಮಾಡಿದ್ದಾನೆ. ನಂತರ ಅಪ್ರಾಪ್ತೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಆರೋಪಿ ಮಹೇಂದ್ರನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆತನನ್ನು ಇನ್ನೂ ಪೊಲೀಸರು ಬಂಧಿಸಲಿಲ್ಲ.