ಅಪ್ರಾಪ್ತ ಆಟೋ ಚಲಾಯಿಸಿ ಅಪಘಾತ, ವ್ಯಕ್ತಿ ಬಲಿ – 4 ವರ್ಷಗಳ ಬಳಿಕ ಮಾಲೀಕನಿಗೆ 1.41 ಕೋಟಿ ದಂಡ

Public TV
1 Min Read

ಕೊಪ್ಪಳ: ಅಪ್ರಾಪ್ತನಿಗೆ ಆಟೋ ಚಲಾಯಿಸಲು ಕೊಟ್ಟ ಪರಿಣಾಮ ಅಪಘಾತ ಮಾಡಿ, ವ್ಯಕ್ತಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆಟೋ ಮಾಲೀಕನಿಗೆ 1,41,61,580 ರೂ. ದಂಡ ವಿಧಿಸಿ ಗಂಗಾವತಿ (Gangavathi) ಹಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿದೆ.ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

2021ರ ಮಾ.10ರಂದು ಯಲಬುರ್ಗಾ ಪಟ್ಟಣದಲ್ಲಿ ಆಟೋ ಮಾಲೀಕನೊಬ್ಬ 12 ವರ್ಷದ ಅಪ್ರಾಪ್ತನ ಕೈಗೆ ಆಟೋ ಚಲಾಯಿಸಲು ಕೊಟ್ಟಿದ್ದರ ಪರಿಣಾಮ ಅಪಘಾತ ನಡೆದಿತ್ತು. ಅಂಗಡಿಯೊಂದರ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಗೆ ಅಪ್ತಾಪ್ರ ಆಟೋದಿಂದ ಡಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಕೊಪ್ಪಳದ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗಂಗಾವತಿ ನಿವಾಸಿ ರಾಜಶೇಖರ ಪಾಟೀಲ್ ಸಾವನ್ನಪ್ಪಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್.ಗಾಣಿಗೇರ ಅಪ್ರಾಪ್ತನಿಗೆ ಆಟೋ ಚಲಾಯಿಸಲು ನೀಡಿದ್ದ ಮಾಲೀಕನಿಗೆ 1,41,61,580 ರೂ. ದಂಡ ವಿಧಿಸಿದ್ದಾರೆ. ದಂಡ ಮೊತ್ತವನ್ನು ರಾಜಶೇಖರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ಸೂಚಿಸಿದ್ದಾರೆ. ಅಪ್ರಾಪ್ತರ ಕೈಗೆ ವಾಹನ ನೀಡುವ ಮುನ್ನ ಎಚ್ಚರ ವಹಿಸಬೇಕೆಂದು ಪ್ರಕರಣದ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಇದನ್ನೂ ಓದಿ: ಸೌದಿಯಿಂದ ಬರೋವಾಗ ಪಾಕ್ ವಾಯುಸೀಮೆ ಬಳಸದೇ ದೆಹಲಿಗೆ ಬಂದ ಮೋದಿ

Share This Article