ರನ್ಯಾ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಚಿವರ ಲಿಂಕ್ ಆರೋಪ – ಯಾರಾದ್ರೂ ಇದ್ರೆ ತನಿಖೆಯಲ್ಲಿ ಗೊತ್ತಾಗುತ್ತೆ ಎಂದ ಪರಮೇಶ್ವರ್‌

Public TV
1 Min Read

ಬೆಂಗಳೂರು: ನಟಿ ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ (Gold Smuggling Case) ಸಚಿವರ ಲಿಂಕ್ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ (G Parameshwar) ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ತನಿಖೆ ಆಗಲಿ ನೋಡೋಣ. ತನಿಖೆಯಲ್ಲಿ ಹೊರಬರಲೇ ಬೇಕಲ್ವಾ? ಯಾರಾದರೂ ಇದ್ದರೆ ತನಿಖೆಯಲ್ಲಿ ಗೊತ್ತಾಗಲಿದೆ ಅಂತಾ ತಿರುಗೇಟು ಕೊಟ್ಟರು. ಇದನ್ನೂ ಓದಿ: ನಟಿ ರಶ್ಮಿಕಾಗೆ ಭದ್ರತೆ ಕೊಡಿ – ಅಮಿತ್‌ ಶಾ, ಪರಮೇಶ್ವರ್‌ಗೆ ಕೊಡವ ಸಂಘಟನೆಯಿಂದ ಪತ್ರ

ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆಗೆ ಆದೇಶ ಆಗಿದೆ. ಸಿಬಿಐ ತನಿಖೆ ಮಾಡ್ತಿದೆ. ನಮಗೆ, ಪೊಲೀಸರಿಗೆ ಯಾವುದೇ ಮಾಹಿತಿ ಕೊಡಲ್ಲ.
ರಾಜ್ಯ ಪೊಲೀಸರಿಗೆ ಏನೂ ಮಾಹಿತಿ ಇಲ್ಲ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರನ್ಯಾ ರಾವ್ ಶೋಕಿಗೆ ಅಧಿಕಾರಿಗಳೇ ಶಾಕ್ – ನಟಿ ಬಳಿಯಿತ್ತು ಕೋಟಿ ಮೌಲ್ಯದ 39 ವಿದೇಶಿ ವಾಚ್‌ಗಳು

ಸಿಬಿಐ ತನಿಖೆಯ ಬಳಿಕ ನೋಡೊಣ. ತನಿಖೆಯ ನಂತರ ಗೊತ್ತಾಗಬೇಕಲ್ವಾ..? ಯಾರೆಲ್ಲ ಇದ್ದಾರೆ ಅಂತ ಅವರು ತನಿಖೆಯಿಂದ ಹೇಳಲಿ ಅಂತೇಳಿದ್ರು. ಇದನ್ನೂ ಓದಿ: Bengaluru| ಕುಂಭಮೇಳ ಟೂರ್ ಪ್ಯಾಕೇಜ್ ನೆಪದಲ್ಲಿ 70 ಲಕ್ಷ ವಂಚನೆ – ಆರೋಪಿ ಅರೆಸ್ಟ್

ಇನ್ನೂ ಕೆಐಎಡಿಪಿ ಜಮೀನು ಹಂಚಿಕೆ ಸಂದರ್ಭದಲ್ಲಿ ಯಾವ ಸಚಿವರು ಇದ್ರು.? ಯಾರು ಶಿಫಾರಸ್ಸು ಮಾಡಿದ್ರು. ಯಾರು ನಿರ್ದೇಶನ ಕೊಟ್ಟರು ಹೇಳಲಿ. ನಮ್ಮೂರು ತುಮಕೂರು, ನನಗೂ ಶಾಕ್ ಆಯ್ತು. ಆ ಜಾಗ ಕೊಟ್ಟಿರೋದು ಗೊತ್ತಿರಲಿಲ್ಲ ಅಂತ ವಿವರಿಸಿದ್ರು.

ಇದೇ ವೇಳೆ ರಶ್ಮಿಕಾ ಮಂದಣ್ಣಗೆ (Rashmika Mandanna) ಭದ್ರತೆ ನೀಡುವಂತೆ ನನಗೆ ಯಾವುದೇ ಪತ್ರ ಬಂದಿಲ್ಲ, ಬಂದ ಬಳಿಕ ಪರಿಶೀಲಿಸುತ್ತೇವೆ ಅಂತಾ ಪರಂ ಸ್ಪಷ್ಟಪಡಿಸಿದರು. ಇದನ್ನೂ ಓದಿ: 7ನೇ ತರಗತಿ ವಿದ್ಯಾರ್ಥಿನಿಗೆ ಬಾಲ್ಯವಿವಾಹ – ಬರಲ್ಲ ಅಂತ ಕಿರುಚಾಡಿದ್ರೂ ಹೊತ್ತೊಯ್ದ ಪಾಪಿಗಳು

Share This Article