ಚೆನ್ನಾಗಿತ್ತು ಅಂತಾ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಜಮೀರ್

Public TV
1 Min Read

ಚಿತ್ರದುರ್ಗ: ತಮ್ಮ ಆರೋಗ್ಯದ ಬಗ್ಗೆ ಸ್ವತಃ ಸಚಿವ ಜಮೀರ್ ಅಹ್ಮದ್ (Zameer Ahmed Khan) ಅವರೇ ಪ್ರತಿಕ್ರಿಯಿಸಿದ್ದಾರೆ.

ಆಸ್ಪತ್ರೆಯಿಂದ ಹೊರಬಂದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ತುಮಕೂರಿನಲ್ಲಿ ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಮನೆಯಲ್ಲಿ ಬೆಳಗ್ಗಿನ ತಿಂಡಿ ವ್ಯವಶ್ತೆ ಮಾಡಿದ್ದರು. ಈ ವೇಳೆ ವಡೆ ಚೆನ್ನಾಗಿತ್ತು ಅಂತಾ 2 ವಡೆ ಜಾಸ್ತಿ ತಿಂದುಬಿಟ್ಟೆ. ಪರಿಣಾಮ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು ಎಂದು ಹೇಳಿದರು.

ಕೂಡಲೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡೆ. ಬ್ಲಡ್ ಟೆಸ್ಟ್ ಸಹಿತ ಎಲ್ಲಾ ತರದ ಟೆಸ್ಟ್ ಅನ್ನೂ ವೈದ್ಯರು ಮಾಡಿದರು. ದೇವರ ದಯೆಯಿಂದ ಎಲ್ಲಾ ನಾರ್ಮಲ್ ಇದೆ. ಯಾವುದೇ ಸಮಸ್ಯೆ ಇಲ್ಲ. ಗ್ಯಾಸ್ಟ್ರಿಕ್ ಆಗಿತ್ತು. ಹೀಗಾಗಿ ಸ್ವಲ್ಪ ಎದೆನೋವು ಆಯಿತು ಎಂದು ಜಮೀರ್ ತಿಳಿಸಿದರು. ಇದನ್ನೂ ಓದಿ: LDF, UDF ರಾಜ್ಯದ ಪರಿಸ್ಥಿತಿ ಹದಗೆಡಿಸುತ್ತಿವೆ- ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರಕ್ಕೆ ಸಚಿವರು ಆಗಮಿಸಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಯಿತು. ಸದ್ಯ ಸಚಿವರ ಆರೋಗ್ಯ ಸುಧಾರಿಸಿದೆ.

Share This Article