ಸಿಎಂ ರಿಲೀಫ್ ಫಂಡ್‍ಗೆ ಒಟ್ಟು 1.80 ಕೋಟಿ ರೂ. ಜಮೆ

Public TV
2 Min Read

– ರಾಜ್ಯದಲ್ಲಿ 215 ಜನರಿಗೆ ಕೊರೊನಾ- 39 ಜನ ಡಿಸ್ಚಾರ್ಜ್
– ಬೆಂಗ್ಳೂರಿನಲ್ಲಿ ಇಂದಿನಿಂದ ಒಂದು ತಿಂಗ್ಳು ಕಠಿಣ ಕ್ರಮ

ಬೆಂಗಳೂರು: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಈವರೆಗೂ 1.80 ಕೋಟಿ ರೂ. ಜಮೆಯಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 215ಕ್ಕೆ ಏರಿಕೆ ಕಂಡಿದ್ದು, ಈ ಪೈಕಿ ನಾಲ್ವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೂ 39 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜೊತೆಗೆ ಒಟ್ಟು 8,560 ಜನರ ಥ್ರೋಟ್ ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ. ಅವರ ರಿಪೋರ್ಟ್ ಇನ್ನೂ ಬಂದಿಲ್ಲ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟುನಿಟ್ಟಿನ ಕ್ರಮದಿಂದಾಗಿ ಕೊರೊನಾ ಹರಡುವುದರ ಮೇಲೆ ಒಂದಿಷ್ಟು ಕಡಿವಾಣ ಬಿದ್ದಿದೆ ಅಂತ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಹೇಳಿದ್ದಾರೆ. ಮೋದಿ ಅವರು ಮೀನುಗಾರಿಕೆಗೆ ವಿನಾಯಿತಿ ಕೊಡಲು ಸೂಚಿಸಿದ್ದಾರೆ. ಇದರಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಮೀನುಗಾರರಿಗೆ ಅನುಕೂಲವಾಗಿದೆ ಎಂದರು.

ಲಾಕ್‍ಡೌನ್ ಸ್ವರೂಪವನ್ನು ಪ್ರಧಾನಿ ಮೋದಿ ಅವರೇ ಭಾನುವಾರದೊಳಗೆ ಘೋಷಿಸುತ್ತಾರೆ. ಅವರು ಆರೋಗ್ಯ ಸೇತು ಮೊಬೈಲ್ ಆ್ಯಪ್ ಅನ್ನು ಹೆಚ್ಚೆಚ್ಚು ಜನ ಉಪಯೋಗಿಸುವಂತೆ ಮಾಡಲು ಎಲ್ಲರಿಗೂ ಕರೆ ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ 2 ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದೆ. ವಾಹನ ದಟ್ಟಣೆ ಇಂದು ಕೇವಲ ಶೇ.2 ಇತ್ತು. ಆದರೆ ಪಾಸ್ ಬೇಕು ಅಂತ 44.46 ಲಕ್ಷ ಜನರು ಮನವಿ ಇಟ್ಟಿದ್ದಾರೆ. ಈವರೆಗೂ ಒಂದು ಲಕ್ಷದ 75 ಸಾವಿರ ಪಾಸ್ ವಿತರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬೆಂಗಳೂರಿನ 273 ಹೊಯ್ಸಳ ವಾಹನವನ್ನು ಸಾಮಾನ್ಯ ಜನರ ತುರ್ತು ಸ್ಪಂದನೆಗೆ ನೀಡಲಾಗಿದೆ. ಈ ಮೂಲಕ ವಾಹನಗಳನ್ನು ಆಸ್ಪತ್ರೆಗೆ ಹೋಗಲು, ತುರ್ತು ಸೇವೆಗೆ ಒದಗಿಸಲು ಮೀಸರಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ ಕೊರೊನಾ ಬಂದಿದೆ ಎಂದರು.

ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಡಿಫರೆಂಟ್ ಆಗಿರುತ್ತೆ. ಈಗಾಗಲೇ ಭವಿಷ್ಯವನ್ನು ನಿರ್ಧರಿಸಲಿದೆ. ಕೋವಿಡ್-19 ಹಾಗೂ ನಾನ್ ಕೋವಿಡ್ ಆಸ್ಪತ್ರೆ ಅಂತ ವ್ಯವಸ್ಥೆ ಮಾಡಲಾಗಿದೆ. ಒಟ್ಟು 11,036 ಬೆಡ್ ಹಾಗೂ 1,036 ಐಸಿಯು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.

ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ರಾಜ್ಯದ 1,332 ಜನರು ಭಾಗವಹಿಸಿದ್ದರು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಈ ಪೈಕಿ 1,100 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ 40 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೇಂದ್ರ ಸರ್ಕಾರವು ಸದ್ಯ ಆರ್.ಎನ್.ಎ ಟೆಸ್ಟ್ ಕಿಟ್ ನೀಡಿದೆ. ರ್ಯಾಪಿಡ್ ಟೆಸ್ಟ್ ಕಿಟ್ ಏಪ್ರಿಲ್ 13ರಂದು ಬರಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *