ಇಲ್ಲಿ ಬರ ಇದೆ ಅಂತಾ ಹೈದರಾಬಾದ್‍ನಲ್ಲಿ ಮದುವೆ ಮಾಡ್ಬಾರ್ದಾ?: ಶಿವಾನಂದ ಪಾಟೀಲ್

Public TV
1 Min Read

ಬೆಂಗಳೂರು: ಹೈದರಾಬಾದ್‍ನಲ್ಲಿ (Hyderabad) ನಡೆದ ಮದುವೆಯಲ್ಲಿ ನಡೆದ ಘಟನೆಯ ಬಗ್ಗೆ ಸಚಿವ ಶಿವಾನಂದ ಪಾಟೀಲ್ (Shivananda Patil) ಪ್ರತಿಕ್ರಿಯಿಸಿದ್ದಾರೆ.

ನಾನು ಹೈದರಾಬಾದ್‍ಗೆ ಲಘ್ನಕ್ಕೆ ಹೋಗಿದ್ದೆ. ಅವರ ಕಲ್ಚರ್ ಅವರು ಮಾಡಿಕೊಂಡರೆ ನಾನೇನು ಮಾಡಲಿ. ಇಲ್ಲಿ ಬರ ಇದೆ ಅಂತ ಅಲ್ಲಿ ಹೈದರಾಬಾದ್ ನಲ್ಲಿ ಮದುವೆ ಮಾಡಬಾರದಾ..?. ಅಲ್ಲಿ ಬರ ಇದೆಯಾ ಎಂದು ಪ್ರಶ್ನಿಸಿದರು.

ಏನಿದು ವಿವಾದ..?: ಕಳೆದ 3 ದಿನದ ಹಿಂದೆ ಹೈದರಾಬಾದ್‍ನಲ್ಲಿ ಮದುವೆ ಸಂಭ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಚಿವರು ಕೂಡ ಭಾಗಿಯಾಗಿದ್ದರು. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಬರ, ಹನಿ ನೀರಿಗೂ ಪರದಾಡುವ ಮೂಲಕ ಜನ ಸಂಕಷ್ಟದಲ್ಲಿದ್ದರೆ ಸಚಿವರು ಮಾತ್ರ ಕಾಲ ಕೆಳಗೆ ರಾಶಿ ರಾಶಿ ಹಣ ಹಾಕಿ ಕೂತು ರಾಜರೋಷವಾಗಿ ಮೆರೆಯುತ್ತಿದ್ದಾರೆ. ಸಚಿವರ ಕಾಲಡಿಯಲ್ಲಿ ರಾಶಿ ಹಣ ಬಿದ್ದಿದ್ದರೂ ಕುಂತಲ್ಲೇ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಒಟ್ಟಿನಲ್ಲಿ ಹೈದರಾಬಾದ್‍ನಲ್ಲೆ ನಡೆದ ಸ್ನೇಹಿತನ ಮಗನ ಮದುವೆ ಸಂಭ್ರಮದಲ್ಲಿ ಸಚಿವರ ಕಾರುಬಾರಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ರೈತರ ಬಗ್ಗೆ ಹೇಳಿಕೆ ನೀಡಿ ಸಚಿವರು ವಿವಾದಕ್ಕೀಡಾಗಿದ್ದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರದ ಹಣಕ್ಕಾಗಿ ಎಂದು ಹೇಳಿ ಭಾರೀ ಚರ್ಚೆಗೆ ಗುರಿಯಾಗಿದ್ದರು. ಇದೀಗ ಇದೇ ಸಚಿವರು ರಾಶಿ ರಾಶಿ ಹಣದೊಂದಿಗೆ ಆಟವಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್